ಮೈಸೂರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನಲ್ಲೆಯಲ್ಲಿ ಮೃಗಾಲಯಕ್ಕೆ ಈ ಬಾರಿ ವಾರದ ರಜೆಯನ್ನ ರದ್ದುಗೊಳಿಸಲಾಗಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಹಕ ನಿರ್ಧೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರದ ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ಇದ್ದು ಆದರೆ ಈ ಬಾರಿ 2-05-17ರ ಮಂಗಳಾವರ ರಜೆಯನ್ನ ರದ್ದುಗೊಳಿಸಲಾಗಿದ್ದು ಸಾಲು ಸಾಲು ರಜೆಗಳು ಜೊತೆಗೆ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನಲ್ಲೆಯಲ್ಲಿ ಶ್ರೀಚಾಮಾರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಪ್ರಕೃತಿ ಉದ್ಯಾನವನ ಎಂದಿನಿಂತೆ ತೆರದಿರುತ್ತದೆ ಎಂದು ಶ್ರೀಚಾಮಾರಾಜೇಂದ್ರ ಮೇಗಾಲಯದ ಕಾರ್ಯನಿರ್ವಹಕ ನಿರ್ಧೇಶಕಿ ಕಮಲಾ ಕರಿಕಳಾನ್ ತಿಳಿಸಿದ್ದಾರೆ.