ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಸದಸ್ಯರುಗಳು ಹಾಗೂ ಪಾಲಿಕೆ ಅಧಿಕಾರಿಗಳಿಗೆ ನೀಡಿದ ಸಿಯುಜಿ ನಂಬರ್ ದುರ್ಬಳಕೆಯಾದ ಹಿನ್ನಲ್ಲೆಯಲ್ಲಿ ಎಲ್ಲಾ ಮೊಬೈಲ್ ನಂಬರ್ ಗಳ ಸೇವೆಯ ದಿಢೀರ್ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳ ಸದಸ್ಯರು 5 ನಾಮ ನಿರ್ದೇಶನ ಸದಸ್ಯರು ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ನೀಡಿದ ಬಿಎಸ್ ಎನ್ ಎಲ್ 200ಕ್ಕೂ ಹೆಚ್ಚು ಮೊಬೈಲ್ ಸೇವೆಯನ್ನ ಸ್ಥಗಿತಗೊಳಿಸಲು ಸರ್ಕಾರದ ಪುರಸಭೆ ಪೌರಡಳಿತ ನಿರ್ದೇಶನವು ನೀಡದ ನಿರ್ದೇಶನ ಅನ್ವಯ ಈ ಸಿಯುಜಿ ನಂಬರ್ ಗಳ ಸೇವೆಯನ್ನ ಸ್ಥಗಿತಗೊಳಿಸಲು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ ಬಿಎಸ್ ಎನ್ ಎಲ್ ಗೆ ಪತ್ರ ಬರೆದು ಎಲ್ಲಾ ಸಿಯುಜಿ ನಂಬರ್ ಗಳನ್ನ ಇಂದಿನಿಂದಲೇ ಸ್ಥಗಿತಗೊಳಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ದುರ್ಬಳಕೆ ಆರೋಪ:
ಬಿಎಸ್ ಎನ್ ಎಲ್ ನಿಂದ ನೀಡಲಾಗಿರುವ 200 ಸಿಯುಜಿ ನಂಬರ್ ಗಳಲ್ಲಿ ಕೆಲವು ಮಹಾನಗರ ಪಾಲಿಕೆಯ ಸದಸ್ಯರುಗಳು ವಿದೇಶಗಳಿಗೆ ಕರೆ ಮಾಡಿದ್ದು ಜೊತೆಗೆ ಹೆಚ್ಚಿನ ಇಂಟರ್ ನೆಟ್ ಉಪಯೋಗಿಸಿದ ಹಿನ್ನಲ್ಲೆಯಲ್ಲಿ ಒಬ್ಬ ಮಹಾನಗರ ಪಾಲಿಕೆ ಸದಸ್ಯೆ ಅವರ ಒಂದು ತಿಂಗಳ ಮೊಬೈಲ್ ಬಿಲ್ 1.50 ಲಕ್ಷ ಮೊತ್ತ. ಸದಸ್ಯನ ಮೊಬೈಲ್ ಬಿಲ್ 75 ಸಾವಿರ ಬಂದಿದ್ದು, ಈ ಹಿನ್ನಲ್ಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಸರ್ಕಾರದ ಪೌರಡಳಿತ ಇಲಾಖೆಗೆ ಪತ್ರ ಬರೆದಿದ್ದು ಅಲ್ಲಿಂದ ಎಲ್ಲಾ ಸಿಯುಜಿ ನಂಬರ್ ಗಳನ್ನ ಬಂದ್ ಮಾಡುವಂತೆ ಸೂಚನೆಯ ಹಿನ್ನಲೆಯಲ್ಲಿ ಎಲ್ಲಾ ಪಾಲಿಕೆಯ ನಂಬರ್ ಗಳ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ.
ಸದಸ್ಯರ ವಿರೋಧ:
ಪಾಲಿಕೆ ನೀಡಿದ ಸಿಯುಜಿ ನಂಬರ್ ಸಿಮ್ ನ್ನ ದಿಢೀರನೇ ವಾಪಸ್ಸ್ ಪಡೆದ ಸರಿ ಇಲ್ಲ. ತಪ್ಪು ಮಾಡಿದ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳುವುದನ್ನ ಬಿಟ್ಟು, ಎಲ್ಲರ ಮೊಬೈಲ್ ನಂಬರ್ ನ್ನ ದಿಢೀರನೇ ಸ್ಥಗಿತಗೊಳಿಸಿರುವ ಕ್ರಮ ಸರಿ ಇಲ್ಲ. ಜನರ ಸಮಸ್ಯೆಗಳನ್ನ ತಿಳಿಯಲು ಈ ನಂಬರ್ ಉಪಯುಕ್ತವಾಗಿದ್ದು, ಇದೇ ನಂಬರ್ ಅನ್ನು ಪುನಹ ಚಾಲನೆಗೆ ತರುವಂತೆ ಕ್ರಮಕೈಗೊಳ್ಳಬೇಕೆಂದು ಹಿರಿಯ ಸದಸ್ಯೆ ನಂದೀಶ್ ಪ್ರೀತಂ ಆಗ್ರಹಿಸಿದ್ದಾರೆ.