ಮೈಸೂರು: ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಸಿಎಂ ಆಪ್ತ ಮರೀಗೌಡ ಏಕವಚನದಲ್ಲಿ ನಿಂದಿಸಿ ಕರ್ತವ್ಯಕ್ಕೆ ಅಡಿಪಡಿಸಿ ಜೀವ ಬೆದರಿಕೆ ಹಾಕಿರುವುದು ಪೊಲೀಸ್ ತನಿಖೆಯಲ್ಲಿ ಸಾಭೀತಾಗಿದ್ದು, ಇತನ ವಿರುದ್ದ ನಜರ್ ಬಾದ್ ಪೊಲೀಸರು 45 ಪುಟಗಳ ದೋಷಾರೋಪ ಪಟ್ಟಿಯನ್ನ ನ್ಯಾಯಾಲಕ್ಕೆ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?:
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಸಿಎಂ ಆಪ್ತ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಮರಿಗೌಡ ಮತ್ತು ಆತನ ಸಹಚರರು, 2016ರ ಜುಲೈ 3 ರಂದು ಸರ್ಕಾರಿ ಅತಿಥಿಗೃಹಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಶಿಖಾ ಶಿಷ್ಟಾಚಾರದಂತೆ ಸ್ವಾಗತಿಸಿ ಹಿಂದಿರುಗುವ ಸಂದರ್ಭದಲ್ಲಿ ಅಲ್ಲೆ ಇದ್ದ ಸಿಎಂ ಆಪ್ತ ಮರಿಗೌಡ ಯಾದಗಿರಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಮೈಸೂರು ತಹಸಿಲ್ದಾರ್ ನವೀನ್ ಜೋಸೆಫ್ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮರೀಗೌಡ ಗಲಾಟೆ ನಡೆಸಿ ಏಕವಚನದಲ್ಲಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯನ್ನ ಹಾಕಿದ.
ಈ ಘಟನೆಗೆ ಸಂಬಂಧಿಸಿದಂತೆ ಶಿಖಾ ಅವರು ನಜರ್ ಬಾದ್ ಠಾಣೆಯಲ್ಲಿ ಕೆ.ಮರೀಗೌಡ ಮತ್ತು ಐವರು ವಿರುದ್ದ ದೂರು ದಾಖಲಿಸಿದ್ದು, ಪೊಲೀಸರಿಗೆ ನೀಡಿದ ಲಿಖಿತ ಹೇಳಿಕೆಯಲ್ಲಿಯೂ ಮರಿಗೌಡ ಮತ್ತು ಐವರ ಹೆಸರನ್ನ ಉಲ್ಲೇಖಿಸಿದರು.
ಒಂದು ತಿಂಗಳ ನಂತರ ಬಂಧನ:
ಜಿಲ್ಲಾಧಿಕಾರಿಗಳಿಗೆ ಸಿಎಂ ಆಪ್ತ ಅವಾಜ್ ಹಾಕಿ ತಲೆ ಮರಸಿಕೊಂಡು ನ್ಯಾಯಾಲಯದಲ್ಲಿ ನಿರೀಕ್ಷಿಣಾ ಜಾಮೀನು ಅರ್ಜಿ ಸಹ ಸಲ್ಲಿಸಿದ. ಆದರೆ ನ್ಯಾಯಾಲಯದಲ್ಲಿ ಎಲ್ಲಾ ಅರ್ಜಿಗಳು ವಜಾಗೊಂಡು ಖುದ್ದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ ಹಿನ್ನಲ್ಲೆಯಲ್ಲಿ ಒಂದು ತಿಂಗಳ ನಂತರ ನಜರ್ ಬಾದ್ ಠಾಣೆಗೆ ಹಾಜರಾಗಿ ಜೈಲು ಪಾಲಾಗಿ ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾನೆ.
45 ಪುಟ ದೋಷಾರೋಪ ಪಟ್ಟಿ:
ಸಿಎಂ ಆಪ್ತ ಮರಿಗೌಡ ಮೈಸೂರು ತಾಲ್ಲೂಕು ಕೋ-ಆಪರೇಟಿವ್ ಸೋಸೈಟಿ ಅಧ್ಯಕ್ಷ ಮಂಜುನಾಥ್, ಬಸವರಾಜು ಅವರ ಮೇಲೆ ಐಪಿಸಿ (341) ಅಕ್ರಮವಾಗಿ ತಡೆಯುವುದು, (353) ಸರ್ಕಾರಿ ಕರ್ತವ್ಯಕ್ಕೆ ಅಡಿ ಪಡಿಸುವುದು, (504) ಅವಹೇಳನ ಮಾಡಿ ಶಾಂತಿ ಭಂಗ, ಹಾಗೂ (506) ಕೊಲೆ ಬೆದರಿಕೆ ಅಡಿಯಲ್ಲಿ ದೋಷಾರೋಪ ಸಲ್ಲಿಸಲಾಗಿದ್ದು ಇನ್ನಿಬ್ಬರು ಆರೋಪಿಗಳಾದ ಆನಂದ್ ಹಾಗೂ ಸಿದ್ದರಾಜು ನಾಪತ್ತೆಯಾಗಿದ್ದಾರೆ ಎಂದು ನಗರದ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಯಲಕ್ಕೆ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಲಾಗಿದೆ.