ಮೈಸೂರು: ಜೋಡಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮೈಸೂರು ಮಹಾನಗರ ಪಾಲಿಕೆಯ 32ನೇ ವಾರ್ಡ್ ಸದಸ್ಯ ಸಿ.ಮಾದೇಶ್ ಅವರ ಸದಸ್ಯತ್ವ ರದ್ದಾಗಿರುವ ಹಿನ್ನಲ್ಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಜುಲೈ 2 ರಂದು ಉಪಚುನಾವಣೆ ಘೋಷಣೆಯಾಗಿದೆ.
ಮೈಸೂರು ಮಹಾನಗರ ಪಾಲಿಕೆಯ 32ನೇ ವಾರ್ಡ್ ನಿಂದ ಸತತ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಸದಸ್ಯ ಸಿ.ಮದೇಶ ಅವರು ಜೋಡಿ ಕೊಲೆ ಪ್ರಕರಣದಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿದ್ದು ಕಳೆದ ಒಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಹಿನ್ನಲ್ಲೆಯಲ್ಲಿ ಅವರ ಸದಸ್ಯತ್ವವನ್ನ ರದ್ದುಗೊಳಿಸಿ ಸುಮಾರು 7 ತಿಂಗಳ ನಂತರ ಉಪಚುನಾವಣೆ ಘೋಷಣೆಯಾಗಿದೆ.
ಚುನಾವಣೆಯ ದಿನಾಂಕ:
ತೆರವಾಗಿರುವ ಸ್ಥಾನಕ್ಕೆ ಜುಲೈ 2 ರಂದು ಉಪಚುನಾವಣೆ ನಡೆಯಲಿದ್ದು, ನಾಳೆಯಿಂದ ಜೂನ್ 21 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ನಾಮ ಪರಿಶೀಲನೆ ಜುನ್ 22 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜೂನ್ 24 ಕಡೆಯ ದಿನಾಂಕವಾಗಿದ್ದು, ಜುಲೈ 5 ರಂದು ಮತ ಏಣಿಕೆ ನಡೆಯಲಿದೆ.
ಅಕಾಂಕ್ಷಿಗಳ ಪಟ್ಟಿ:
ಜೆಡಿಎಸ್ ವರಿಷ್ಟರು ಸಿ.ಮಾದೇಶ್ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ಅವರ ಪತ್ನಿ ಭಾಗ್ಯ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು ಅವರು ಉಪ ಚುನಾವಣೆಯಲ್ಲಿ ಸ್ಫರ್ಧೀಸಲು ನಿರಾಕರಿಸಿದರೆ ಎಸ್.ಬಿ.ಎಂ ಮಂಜು ಗೆ ಟಿಕೆಟ್ ಸಿಗಬಹುದು. ಇನ್ನು ಕಾಂಗ್ರೆಸ್ ನಿಂದ ಪೈ.ಚಿಕ್ಕಪುಟ್ಟಿ ತಮ್ಮ ಕೆ.ಮಾದೇಶ್ ಸ್ಪರ್ಧೆ ಮಾಡುವ ಸಾದ್ಯತೆ ಇದ್ದು ಬಿಜೆಪಿ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ.