ಮೈಸೂರು: 60 ವರ್ಷಗಳ ನಂತರ ಮೈಸೂರು ರಾಜ ವಂಶಸ್ಥರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ತ್ರಿಷಿಕಾ ಕುಮಾರ್ ಸಿಂಗ್ ಒಡೆಯರ್ 5 ತಿಂಗಳ ಗರ್ಭವತಿಯಾಗಿದ್ದು, ದಸರಾ ನಂತರ ಮಗವಿನ ಜನನವಾಗಲಿದೆ ಎಂದು ಅರಮನೆಯ ಜ್ಯೋತಿಷಿಯೊಬ್ಬರು ಖಚಿತ ಪಡಿಸಿದ್ದಾರೆ.
ಕಳೆದ 2016 ಜೂನ್ 27 ರಂದು ಯದೂವೀರ್ ಕೃಷ್ಣದತ್ತಚಾಮರಾಜ ಒಡೆಯರ್ ರಾಜಸ್ಥಾನದ ಮೂಲದ ರಾಜ ಮನೆತನಕ್ಕೆ ಸೇರಿದ ತ್ರಿಷಿಕಾ ಕುಮಾರಿ ಸಿಂಗ್ ನಡುವೆ ಮೈಸೂರಿನ ಅರಮನೆಯಲ್ಲಿ 6 ದಿನಗಳ ಕಾಲ ಅದ್ದೂರಿಯಾಗಿ ಮದುವೆ ನಡೆದಿತ್ತು. ನಂತರ ಒಂದು ವರ್ಷದ ನಂತರ ಅರಮನೆಯ ಜ್ಯೋತಿಷಿಯೊಬ್ಬರು ತ್ರಿಷಿಕಾ ಕುಮಾರಿ ಸಿಂಗ್ ಒಡೆಯರ್ ಈಗ 5 ತಿಂಗಳ ಗರ್ಭೀಣಿಯಾಗಿದ್ದು ದಸರಾ ನಂತರ ಮಗುವಿನ ಜನನ ಆಗಲಿದ್ದು, 60 ವರ್ಷಗಳ ನಂತರ ಅರಮನೆಗೆ ಮಕ್ಕಳ ಭಾಗ್ಯ ಬರಲಿದೆ.
ಸಾರ್ವಜನಿಕವಾಗಿ ಕಾಣಿಸದ ತ್ರಿಷಿಕಾ:
ಮದುವೆಯಾದ ನಂತರ 6 ತಿಂಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡ ಯದೂವೀರ್ ಜೊತೆ ಕಾಣಿಸಿಕೊಂಡ ತ್ರಿಷಿಕಾ ಕಳೆದ ನಾಲ್ಕು ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ಯದೂವೀರ್ ತಾಯಿ ಜೊತೆ ತಮ್ಮ ಎಲ್ಲಾ ಮನೆ ದೇವರುಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಆ ಸಂದರ್ಭದಲ್ಲೂ ತ್ರಿಷಿಕಾ ಕಾಣಿಸಿಕೊಂಡಿಲ್ಲ, ಜೊತೆಗೆ ತ್ರಿಷಿಕಾ ಗರ್ಭವತಿಯಾದ ಕಾರಣ ಬೆಂಗಳೂರಿನ ತಮ್ಮ ತಾಯಿ ಮನೆಯಲ್ಲಿ ಹಾರೈಕೆಯಲ್ಲಿದ್ದಾರೆ.
ಶಾಪ ವಿಮೋಚನೆ:
ಮಹಾಲಿಂಗೂ ಮಡುವಾಗಿ ತಲಕಾಡು ಮರುಳಾಗಿ ರಾಜರಿಗೆ ಮಕ್ಕಳಾಗದಿರಲಿ ಎಂದು ಹಿಂದೆ ಅಲಮೇಲಮ್ಮ ಶಾಪದಿಂದ ರಾಜರಿಗೆ ಇಂದಿಗೂ ಮಕ್ಕಳಗಿಲ್ಲ. ಆದರೆ ರಾಜರು ದತ್ತು ತೆಗೆದುಕೊಂಡ ಮಕ್ಕಳಿಗೆ ಮಾತ್ರ ಮಕ್ಕಳಾಗುತ್ತದೆ. ಅದರಂತೆ ಯದೂವೀರ್ ತಂದೆಯಾಗಿದ್ದು ಇದಕ್ಕಾಗಿ ಯದೂವೀರ್ ಕಳೆದ ಒಂದು ವರ್ಷಗಳಿಂದ ಎಲ್ಲಾ ದೇವರಿಗೂ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಅರಮನೆಯಿಂದ ಸ್ಪಷ್ಟನೆ ಇಲ್ಲ:
ತ್ರಿಷಿಕಾ ಕುಮಾರಿ ಸಿಂಗ್ ಒಡೆಯರ್ ಗರ್ಭವತಿಯಾಗಿರುವ ಬಗ್ಗೆ ರಾಜ ಮನೆತನದ ಮೂಲಗಳು ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಈ ವಿಚಾರ ಮಾದ್ಯಮಗಳಿಗೆ ತಿಳಿಯದಂತೆ ಗೌಪ್ಯವಾಗಿ ಇಡಲಾಗಿದೆ. ಯದೂವೀರ್ ಅವರನ್ನ ಈ ವಿಚಾರದಲ್ಲಿ ಸಂಪರ್ಕಿಸಲು ಯತ್ನಿಸಿದಾಗ ಈ ಬಗ್ಗೆ ನಾನೇ ಸಾಮಾಜಿಕ ಜಾಲಾತಾಣಗಳಲ್ಲಿ ಖಚಿತ ಪಡಿಸುತ್ತೇನೆ ಎಂದು ಸ್ಪಷ್ಟ ಪಡಿಸಿದರು.