ಮೈಸೂರು: ಕೇಂದ್ರದ ತೈಲ ಬೆಲೆ ನಿತ್ಯವೂ ಪರಿಷ್ಕರಣೆಯನ್ನ ವಿರೋಧಿಸಿ ಮೈಸೂರು ವಿಭಾಗೀಯ ಮಟ್ಟದ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಕರೆ ನೀಡಿದ 24 ಗಂಟೆಗಳ ಪೆಟ್ರೋಲ್ ಬಂಕ್ ಗಳ ಬಂದ್ ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ತೈಲ ಬೆಲೆಯನ್ನ ಪ್ರತಿನಿತ್ಯವೂ ಮಾರುಕಟ್ಟೆ ದರದಂತೆ ನಿಗದಿಪಡಿಸಲಿ ನಿರ್ಧರಿಸಿರುವುದನ್ನ ವಿರೋಧಿಸಿ ಮೈಸೂರು ವಿಭಾಗೀಯ ಮಂಡ್ಯ, ರಾಮನಗರ, ಚಾಮಾರಾಜನಗರ, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ ಭಾಗಶ: ಬಂದ್ ಆಗಿದೆ. ಮೈಸೂರು ನಗರದಲ್ಲಿ 120 ಬಂಕ್ ಸೇರಿದಂತೆ ಜಿಲ್ಲಾದ್ಯಂತ ಎಲ್ಲ 240ಕ್ಕೂ ಹೆಚ್ಚು ಬಂಕ್ ಗಳು ಬಂದ್ ಮಾಡಲಾಗಿದೆ. ಆದರೆ ಮೈಸೂರು ನಗರದ ಕೆಲವು ಪೆಟ್ರೋಲ್ ಬಂಕ್ ಗಳು ತೆರೆದಿದ್ದು, ವಾಹನ ಸವಾರರ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ.