ಮೈಸೂರು: ಶಾಸಕರಾದ ಎಂ.ಕೆ ಸೋಮಶೇಖರ್ ರವರು ತಮ್ಮ ಕಚೇರಿಯಲ್ಲಿ ನಿಧಿ ಚೆಕ್ ವಿತರಣೆ ಕಾರ್ಯಕ್ರಮ ಏರ್ಪಡಿಸಿದ್ದು, ಸುಮಾರು 20 ಜನ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸುಮಾರು 4 ವರ್ಷಗಳಿಂದ ಬಡವರಿಗೆ ಪರಿಹಾರ ನಿಧಿಯಿಂದ ಚೆಕ್ ವಿತರಿಸಲಾಗುತ್ತಿದ್ದು, ಇಂದು 20 ಜನರಿಗೆ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಬಡ ಜನರಿಗೆ ಶೇ.25 ರಷ್ಟು ಪರಿಹಾರ ನಿಧಿಯಿಂದ ಹಣ ನೀಡಲಾಗಿದೆ.
ಅಂಬೇಡ್ಕರ್ ದಿನಾಚರಣೆಯಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಇಬ್ಬರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಮತ್ತಷ್ಟೂ ಬಡ ಫಲಾನುಭವಿಗಳಿಂದ ಅರ್ಜಿ ಬಂದಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಪರಿಹಾರ ನಿಧಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಡ ಫಲಾನುಭವಿಗಳು ಹಾಗೂ ಮತ್ತಿತರರು ಹಾಜರಿದ್ದರು.