ಮೈಸೂರು: ಆಧುನಿಕ ಮೊಬೈಲ್ ಯುಗದಲ್ಲಿ ಎಲ್ಲರಿಗೂ ಅಂದವಾದ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಆಸೆ. ಇಂತಹ ಆಸೆಯನ್ನ ಬಂಡವಾಳ ಮಾಡಿಕೊಂಡ ರೈತನೊಬ್ಬ ತಾನು ಬೆಳೆದ ಬೆಳೆಯ ಮುಂದೆ ಪೋಟೋ ಸೆಲ್ಫಿ ತೆಗೆದುಕೊಳ್ಳಲು ದರ ನಿಗದಿ ಮಾಡಿದ್ದು, ಸೆಲ್ಫಿಯಿಂದಲೂ ಆದಾಯ ಮಾಡುತ್ತಿದ್ದಾರೆ. ಹಾಗಾದರೇ ಯಾವುದೂ ಈ ಬೆಳೆ. ಒಂದು ಸೆಲ್ಫಿಗೆ ಎಷ್ಟು ಹಣ ಎಂಬ ಹಿನ್ನಲ್ಲೆಯ ಕೂತುಹಲವೇ ಈ ಸ್ಟೊರಿ…
ಮುಂಗಾರು ಮಳೆ ಕೈಕೊಟ್ಟು ಬೆಳೆಯಲ್ಲ ಒಣಗುತ್ತಿರುವ ಇಂತಹ ಸಂಧರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766ರ ಊಟಿ ಕೇರಳ ಹೆದ್ದಾರಿ ಪಕ್ಕದಲ್ಲಿ ಬರುವ ಬೇಗೂರಿನ ಗ್ರಾಮ ರೈತನೊಬ್ಬ ಕಷ್ಟ ಪಟ್ಟು ಸೂರ್ಯಕಾಂತಿ ಬೆಳೆದಿದ್ದು, ಈ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಸೂರ್ಯಕಾಂತಿಯ ಬಾಗಿದ ಹೂಗಳು ಹೆದ್ದಾರಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಇದರಿಂದ ಊಟಿ ಕೇರಳಕ್ಕೆ ಹೋಗುವ ಪ್ರವಾಸಿಗರು ಈ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತಿದ್ದು, ಜೊತೆಗೆ ಸೂರ್ಯಕಾಂತಿ ಹೊಲದೊಳಗೆ ಹೋಗಿ ಸೆಲ್ಫಿ ತೆಗೆದುಕೊಂಡು ಬೆಳೆಯನ್ನ ಹಾಳು ಮಾಡುತ್ತಿದ್ದಾರೆ.
ಒಂದು ಸೆಲ್ಫಿ 20ರೂ:
ಸೆಲ್ಫಿ ಪ್ರಿಯರು ಹೆಚ್ಚಾಗಿ ಹೊಲದೊಳಗೆ ಬರುತ್ತಿರುವುದರಿಂದ ಸೂರ್ಯಕಾಂತಿ ಹೂಗಳು ಹಾಳಾಗುತ್ತಿದ್ದು. ಇದನ್ನ ಕಂಡ ರೈತ ಹೊಸ ಉಪಾಯ ಕಂಡು ಹಿಡಿದು ಒಂದು ಸೆಲ್ಫಿ ತೆಗೆದುಕೊಳ್ಳಲು 20 ರೂಪಾಯಿ ಹಣ ನಿಗದಿ ಪಡಿಸಿ ಬೋರ್ಡ್ ಹಾಕಿದ. ಇದರಿಂದ ರಂಜಾನ್ ಹಬ್ಬಕ್ಕೆ ಊಟಿ, ಕೇರಳ, ಮೈಸೂರಿಗೆ ಆಗಮಿಸುವ ಪ್ರವಾಸಿಗರು ಈ ಸ್ಥಳದಲ್ಲಿ ನಿಂತು ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿದ್ದು, ರೈತನಿಗೆ ಸ್ವಲ್ಪ ಆದಾಯ ಬರುತ್ತಿದ್ದು, ಇದರಿಂದ ಖುಷಿಯಾಗಿದೆ ಎನ್ನುತ್ತಾನೆ.
ಇಲ್ಲಿ ಪ್ರವಾಸಿಗರು ತೆಗೆದುಕೊಂಡ ಸೆಲ್ಫಿ ಫೋಟೋಗಳನ್ನ ತಮ್ಮ ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿ ಹಾಕಿ ಖುಷಿ ಪಡುತ್ತಿದ್ದು, ಈ ಜಾಗದಲ್ಲಿ ಈಗ ಎಳೆ ನೀರು, ಐಸ್ ಕ್ರೀಂ ವ್ಯಾಪಾರಗಾರರು ವ್ಯಾಪಾರ ಶೂರು ಮಾಡಿದ್ದು ಎಲ್ಲರಿಗೂ ಆದಾಯ ಬರುತ್ತಿದೆ. ಎಲ್ಲರೂ ಖುಷಿಪಡುತ್ತಿದ್ದಾರೆ.