News Kannada
Wednesday, October 05 2022

ಮೈಸೂರು

ಹೆಚ್ಡಿಕೆ ಮತ್ತೊಮ್ಮೆ ಸಿಎಂ ಆಗಬೇಕು: ಹೆಚ್.ಡಿ.ದೇವೇಗೌಡ - 1 min read

Photo Credit :

ಹೆಚ್ಡಿಕೆ ಮತ್ತೊಮ್ಮೆ ಸಿಎಂ ಆಗಬೇಕು: ಹೆಚ್.ಡಿ.ದೇವೇಗೌಡ

ಮೈಸೂರು: ಎಚ್.ಡಿ.ಕುಮಾರ ಸ್ವಾಮಿ ಮತ್ತೊಮ್ಮೆ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ಇದು ಪುತ್ರ ವ್ಯಾಮೋಹವಲ್ಲ. ರಾಜ್ಯದ ರೈತರ ಅಭಿವೃದ್ಧಿ ಅವರಿಂದ ಮಾತ್ರ ಸಾಧ್ಯ. ಹೀಗಾಗಿ ನನಗೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬ ಕನಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ಹುಣಸೂರು ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಈ ರಾಜ್ಯದ ಅನ್ನದಾತರಾದ ರೈತರ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿಯಿಲ್ಲ. ಅದು ಜೆಡಿಎಸ್ಗೆ ಮಾತ್ರ ಇರುವುದು. ನನ್ನ ಜೀವಿತಾವಧಿಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವ ಕನಸಿದೆ. ಅದನ್ನು ನನಸು ಮಾಡುವ ಸಲುವಾಗಿ ಇಳಿ ವಯಸ್ಸಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಸಮಾವೇಶ ನಡೆಸುತ್ತಿದ್ದೇನೆ.

ನಾಡಿನ ರೈತರ ಹಿತಕಾಯುವ ಪಕ್ಷ ಅಂತ ಏನಾದರು ಇದ್ದರೆ ಅದು ಜೆಡಿಎಸ್ ಮಾತ್ರ. ಆದ್ದರಿಂದ ಕಾರ್ಯಕರ್ತರು ಹಳೇ ಮೈಸೂರು ಪ್ರಾಂತ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು. ಆ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಭದ್ರವಾಗಿ ನೆಲೆಯೂರುವಂತೆ ಮಾಡಬೇಕು. ರಾಜ್ಯ ಅಭಿವೃದ್ಧಿಯತ್ತ ಸಾಗಬೇಕಾದರೆ, ರೈತರು ನೆಮ್ಮದಿಯಾಗಿ ಬದುಕ ಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಇದನ್ನು ವಿರೋಧಪಕ್ಷದವರು ಪುತ್ರ ವ್ಯಾಮೋಹ ಎಂದು ಹೇಳಬಹುದು. ಆದರೆ ಇದು ವ್ಯಾಮೋಹ ಅಲ್ಲ ಕನಸು ಅಷ್ಟೆ.

ನನಗೆ ಹೋರಾಟ ಹೊಸತೇನಲ್ಲ. ನನ್ನ ರಾಜಕೀಯ ಬದುಕಿನಲ್ಲಿ ಹೋರಾಡುತ್ತಲೇ ಬಂದಿದ್ದೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ ರೈತರ ನೋವನ್ನು ಅರಿತಿದ್ದೇನೆ. ದಿ.ದೇವರಾಜ ಅರಸರ ಕಾಲದಲ್ಲೂ ರಾಜಿಯಿಲ್ಲದೆ ಹೋರಾಟ ಮಾಡಿದ್ದೇನೆ. ಈಗಲೂ ಮಾಡುತ್ತೇನೆ. ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ಬೇಕಾದರು ಮಾತನಾಡಬಹುದು. ಆದರೆ ಅವರು ಇವತ್ತು ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಜೆಡಿಎಸ್ ಕಾರಣ ಅವರನ್ನು ರಾಜಕೀಯವಾಗಿ ಬೆಳೆಸಿದ್ದೇ ಜೆಡಿಎಸ್. ಅವರೇನು ಶಕ್ತಿಯಲ್ಲ ಕೇವಲ ವ್ಯಕ್ತಿಯಷ್ಟೆ. ಹೀಗಾಗಿ ಅವರು ಯಾವುದೇ ಟೀಕೆ ಟಿಪ್ಪಣಿ ಮಾಡಿದರೂ ಅದಕ್ಕೆ ಕಾಲ ಉತ್ತರ ನೀಡುತ್ತದೆ ಎಂದರು. ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಚಿಕ್ಕಮಾದು ಹಾಗೂ ಮುಖಂಡರು ಇದ್ದರು.

See also  ಪತಿಯನ್ನು ಹುಡುಕಿ ಕೊಡಿ: ಪತ್ನಿ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು