ಮೈಸೂರು: ಪ್ರಾಣಿ ವಿನಿಮಯದಡಿ ಮೈಸೂರು ಮೃಗಾಲಯಕ್ಕೆ ಸೂರತ್ ನಿಂದ ನೂತನ ಅತಿಥಿಗಳಾದ ಎರಡು ನೀರು ನಾಯಿಗಳನ್ನ ಬರಮಾಡಿಕೊಳ್ಳಲಾಗಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ ಅಂಗೀಕಾರದನ್ವಯ ಗುಜರಾತ್ ರಾಜ್ಯದ ಸೂರತ್ ನಗರದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಮೃಗಾಲಯದಿಂದ ಪ್ರಾಣಿ ವಿನಿಮಯ ಕಾರ್ಯಕ್ರದಡಿಯಲ್ಲಿ ಒಂದು ಗಂಡು, ಒಂದು ಹೆಣ್ಣು ನೀರು ನಾಯಿಗಳನ್ನ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಬರಮಾಡಿಕೊಳ್ಳಲಾಗಿದ್ದು, ನೀರು ನಾಯಿಗಳ ವಿನಿಮಯದಿಂದ ಮೈಸೂರು ಮೃಗಾಲಯವೂ ಸೂರತ್ ಮೃಗಾಲಯಕ್ಕೆ ಕತ್ತೆ ಕಿರುಬ(ಹೆಣ್ಣು), ಕಪ್ಪು ಹಂಸವನ್ನ (ಹೆಣ್ಣು) ನೀಡಿ ಎರಡು ನೀರು ನಾಯಿಗಳನ್ನ ಪಡೆದುಕೊಳ್ಳಲಾಗಿದೆ.