News Kannada
Sunday, November 27 2022

ಮೈಸೂರು

ವಲ್ಡ್ ಯೋಗ ಅಲೆಯನ್ಸ್ ರವರ ಸಹಯೋಗದೊಂದಿಗೆ “ಯೋಗ ಘಟಿಕೋತ್ಸವ” ಸಮಾರಂಭ ಕಾರ್ಯಕ್ರಮ - 1 min read

Photo Credit :

ವಲ್ಡ್ ಯೋಗ ಅಲೆಯನ್ಸ್ ರವರ ಸಹಯೋಗದೊಂದಿಗೆ

ಮೈಸೂರು: ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಮೈಸೂರಿನ ಮಹಾಪೌರರಾದ ಎಂ.ಜೆ.ರವಿಕುಮಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಮನುಷ್ಯ ಜೀವನದಲ್ಲಿ ಮುಂದೆ ಬರಬೇಕಾದರೆ ತಾಳ್ಮೆ ಸಹನೆ ಅತ್ಯವಶ್ಯಕ. ಯಾವುದೇ ಕೆಲಸ ಮಾಡುವಲ್ಲಿ ತಾಳ್ಮೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ಇದಕ್ಕೆ ಅನುಭವ ಗುಣವಾಗಿ ಯೋಗಾಭ್ಯಾಸ ಇದ್ದು, ಅದನ್ನು ದಿನನಿತ್ಯ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ, ದೈಹಿಕವಾಗಿ, ಮಾನಸಿಕವಾಗಿ ಶಕ್ತರಾಗಲು ಸಾಧ್ಯ.ಯೋಗಾಭ್ಯಾಸಕ್ಕೆ ವಯಸ್ಸಿನ ವಯೋಮಿತಿ ಇರುವುದಿಲ್ಲಿ. ಯೋಗವನ್ನು ಬಾಲ್ಯ ವ್ಯಾಸ್ಥೆಯಿಂದ ವೃದ್ಯಪ್ತಿಯವರಗೆ ಅಭ್ಯಾಸ ಮಾಡಬಹುದು.ಯಾವುದೇ ರೋಗದಿಂದ ವಿಮುಕ್ತರಾಗಬಹುದು.

ಆರೋಗ್ಯಕ್ಕೆ ಎಲ್ಲಾ ಶಿಕ್ಷಣಕ್ಕಿಂತ ಯೋಗ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ದಿನನಿತ್ಯ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬಹುದು. ಇಂದು ಗುರು ಪೂರ್ನಿಮೆದಿನವಾಗಿದ್ದು ಇದೇ ಯೋಗ ಪದವಿಧಾರಣೆ ಮಾಡುತ್ತಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿರುವ ಈ ಸ್ಥಳದಲ್ಲಿಯೇ ಪದವಿ ಪ್ರಶಸ್ತಿ ಸ್ವೀಕರಿಸುತ್ತಿದ್ದು ಒಂದಕ್ಕೊಂದು ಕಾಕತಾಳಿಯಾಗಿದೆ. ಒಬ್ಬ ವ್ಯಕ್ತಿ ಸಹನೆ ಹಾಗೂ ತಾಳ್ಮೆ ಇದ್ದರೇ ಏನನ್ನಾದರೂ ಸಾಧಿಸಬಹುದು. ವಿಶ್ವದಾಖಲೆಗಾಗಿ ವಿದೇಶಕ್ಕೆ ತೆರಳುತ್ತಿರುವ ಯೋಗಪಟುಗಳನ್ನು ನನ್ನ ಮಕ್ಕಳೆಂದು ಭಾವಿಸಿ ಅವರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ 2016-17 ನೇ ಸಾಲಿನಲ್ಲಿ ಯೋಗ ಶಿಕ್ಷಣದಲ್ಲಿ ಉತ್ತಿರ್ಣರಾದ 75 ಮಂದಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತ್ತು. ಸಮಾರಂಭದಲ್ಲಿ ಕನ್ಯಾಕುಮಾರಿಯ ವಿವೇಕನಂದ ಕೇಂದ್ರದ ಸುರಚಿತ ಮಾತಾಜೀ, ಮಹದೇವಪ್ಪ, ಡಾ.ಪಿ.ಎನ್.ಮಹೇಶ್ ಕುಮಾರ್, ಹೆಚ್.ಎ.ಶಶಿರೇಖಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

See also  ವ್ಯಕ್ತಿಯನ್ನು ಅಪಹರಿಸಿ ದರೋಡೆ: ಮೂವರು ಮಂಗಳಮುಖಿಯರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು