News Kannada
Friday, December 02 2022

ಮೈಸೂರು

13 ವರ್ಷಗಳ ನಂತರ ಮೈಸೂರು ಮೃಗಾಲಯದಲ್ಲಿ ಹೆಣ್ಣು ಆನೆ ಮರಿ ಜನನ

Photo Credit :

13 ವರ್ಷಗಳ ನಂತರ ಮೈಸೂರು ಮೃಗಾಲಯದಲ್ಲಿ ಹೆಣ್ಣು ಆನೆ ಮರಿ ಜನನ

ಮೈಸೂರು: ಶತಮಾನೋತ್ಸವ ಸಂಭ್ರಮದಲ್ಲಿರುವ ಮೈಸೂರು ಮೃಗಾಲಯದಲ್ಲಿ 13 ವರ್ಷಗಳ ನಂತರ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಚಾಮರಾಜೇಂದ್ರ ಮೃಗಾಯಲದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಶತಮಾನೋತ್ಸವ ಸಂಭ್ರದಲ್ಲಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಐರಾವತಿ ಎಂಬ ಹೆಣ್ಣು ಆನೆ ಕಳೆದ ಶುಕ್ರವಾರ ಹುಟ್ಟಿದ್ದನ್ನ ಮೃಗಾಯಲದ ಅಧಿಕಾರಿಗಳು ಖಚಿತ ಪಡಿಸಿದ್ದು, ಆದರೆ ಮರಿಯ ಆರೋಗ್ಯ ದೃಷ್ಟಿಯಿಂದ ಮಾದ್ಯಮಗಳಿಗೆ ತಿಳಿಸಿರಲಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಾಹಣಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಶುಕ್ರವಾರ ಜನ್ಮ ತಾಳಿದ್ದರಿಂದ ಆನೆ ಮರಿಗೆ ಪಾರ್ವತಿ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಖಚಿತ ಪಡಿಸಿದ ಅಧಿಕಾರಿಗಳು ಈಗ ಆನೆ ಮರಿ ಆರೋಗ್ಯವಾಗಿದೆ ಎಂದು ತಿಳಿದಿದ್ದಾರೆ.

ಹುಟ್ಟಿದಾಗ 120 ಕೆ.ಜಿ ತೂಕವಿದ್ದು, ಇದೀಗ 115 ಕೆ.ಜಿ ಇದ್ದು ಒಂದೆರೆಡು ದಿನಗಳಲ್ಲಿ ತೂಕ ಹೆಚ್ಚಲಿದೆ ಎಂದು ಮಾಹಿತಿ ನೀಡಿದ್ದಾರೆ. ಮೃಗಾಯಲದಲ್ಲಿ ಒಟ್ಟು 9 ಆನೆಗಳಿದ್ದು, ಅದರಲ್ಲಿ ಲಕ್ಷ್ಮೀ, ಪದ್ಮವಾತಿ, ಕೊಳ್ಳೆಗಾಲಿ, ಐರಾವತಿ, ಐಶು ಎಂಬ 5 ಹೆಣ್ಣು ಆನೆಗಳಿದ್ದು, ರಾಮ, ಅಭಿ, ಮಾದೇಶ ಹಾಗೂ ರಿಚಿ ಎಂಬ ಆಫ್ರೀಕನ್ ಆನೆ ಇದೆ.

 

 

See also  ಸಾಯಿ ಮಂದಿರದಲ್ಲಿ ಶಿರಡಿ ಸಾಯಿ ಬಾಬಾ ಪ್ರತ್ಯಕ್ಷ ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು