News Kannada
Tuesday, November 29 2022

ಮೈಸೂರು

ದಸರಾ-2017 ಲಾಂಛನ ಬಿಡುಗಡೆ…ಸೆಪ್ಟೆಂಬರ್ 21 ಕ್ಕೆ ದಸರಾಗೆ ಚಾಲನೆ - 1 min read

Photo Credit :

ದಸರಾ-2017 ಲಾಂಛನ ಬಿಡುಗಡೆ...ಸೆಪ್ಟೆಂಬರ್ 21 ಕ್ಕೆ ದಸರಾಗೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ-2017ರ ಲಾಂಛನವನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅನಾವರಣಗೊಳಿಸಿದರು.

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಅತ್ಯಂತ ವೈಭವಯೂತವಾಗಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವವನ್ನ ಈ ಬಾರಿ ಅದ್ದೂರಿಯೂ ಅಲ್ಲದ ಸರಳೆತೆಯೂ ಅಲ್ಲದ ಸಂಪ್ರದಾಯಕ ದಸರಾ ನಡೆಸುತ್ತಿದ್ದು ದಸರಾ ಮಹೋತ್ಸವದ ಲಾಂಛನವನ್ನ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅನಾವರಣಗೊಳಿಸಿದರು.

ಆಗಸ್ಟ್ 21 ರಿಂದ 30 ರವರೆಗೆ 10 ದಿನಗಳ ಕಾಲ ಸಂಪ್ರಾದಯಕವಾಗಿ ನಡೆಯುವ ನಾಡ ಹಬ್ಬ ದಸರಾಗೆ ಆಗಸ್ಟ್ 21 ರಂದು ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದಲ್ಲಿ ನಾಡ ಅದಿ ದೇವತೆ ಚಾಮುಂಡಿ ತಾಯಿಗೆ ಬೆಳಗ್ಗೆ 9 ಗಂಟೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸಿಎಂ ನೇತೃತ್ವದ ದಸರಾ ಉನ್ನತ ಸಮಿತಿ ಸಭೆಯಲ್ಲಿ ಈಗಾಗಲೇ ನಿರ್ಧರಿಸಿರುವಂತೆ 15 ಕೋಟಿ ಅನುದಾನ ನೀಡಲು ಸರ್ಕಾರ ಅನುಮತಿ ನೀಡಿದ್ದು ನಗರದ ಒಳ್ಳ ರಸ್ತೆಗಳನ್ನ ನಿರ್ಮಾಣ ಮಾಡಲು 21 ಕೋಟಿಯನ್ನ ನೀಡಲಾಗಿದ್ದು, ಇದರ ಜೊತೆಗೆ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ 18 ರಸ್ತೆಗಳ ದುರಸ್ತಿಗಾಗಿ 118 ಕೋಟಿಯನ್ನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಇದೇ ಮೊದಲ ಬಾರಿಗೆ 2 ತಿಂಗಳ ಮೊದಲೇ ದಸರಾ ಲಾಂಛನವನ್ನ ಬಿಡುಗಡೆ ಮಾಡಿದ್ದು ಇದೇ ಲಾಂಛನವನ್ನ ದಸರಾದ ಶಾಶ್ವತ ಲಾಂಛವ ಮಾಡವ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಇದೇ ಸಂಧರ್ಭದಲ್ಲಿ ತಿಳಿಸಿದರು.

See also  ನಾಗಮಂಗಲ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು