News Kannada
Friday, December 02 2022

ಮೈಸೂರು

ಮೈಸೂರಿನ ಡಿ.ಕೆ ಮಾವನ ಮನೆಯಲ್ಲಿ 2ನೇ ದಿನವೂ ಮುಂದುವರೆದ ಐಟಿ ದಾಳಿ

Photo Credit :

ಮೈಸೂರಿನ ಡಿ.ಕೆ ಮಾವನ ಮನೆಯಲ್ಲಿ 2ನೇ ದಿನವೂ ಮುಂದುವರೆದ ಐಟಿ ದಾಳಿ

ಮೈಸೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮಾವನ ಮನೆಯ ಮೇಲಿನ ಐಟಿ ದಾಳಿ ಎರಡನೇ ದಿನವೂ ಮುಂದುವರೆದಿದ್ದು ಐಟಿಯ ಎರಡು ತಂಡಗಳು ದಾಖಲಾತಿಗಳ ಪರಿಶೀಲನೆ ಜೊತೆಗೆ ಮಹಜಾರ್ ಮಾಡುತ್ತಿದ್ದಾರೆ. ನಗರದ ಇಟ್ಟಿಗೆ ಗೂಡಿನಲ್ಲಿರುವ ಡಿ.ಕೆ ಶಿವಕುಮಾರ್ ಮಾವ ತಿಮ್ಮಯ್ಯ ಅವರ ಮನೆ, ಕಛೇರಿ ಹಾಗೂ ಕಾರ್ಖಾನೆಯ ಮೇಲೆ ನಿನ್ನೆ ಬೆಳಗ್ಗೆಯಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ರಾತ್ರಿ ಪೂರ್ತಿ ಪರಿಶೀಲನೆ ಮಾಡಿದ್ದಾರೆ.ಇಂದು ಬೆಳಗ್ಗೆ ಡಿ.ಕೆ ಶಿವಕುಮಾರ್ ಮಾವ ತಿಮ್ಮಯ್ಯ ಅವರನ್ನ ಕಾರ್ಖಾನೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಅಲ್ಲಿದ್ದ ದಾಖಲಾತಿಗಳನ್ನು ಮನೆಗೆ ತೆಗೆದುಕೊಂಡು ಬಂದಿದ್ದು ಇಟ್ಟಿಗೆ ಗೂಡಿನ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ಜೊತೆಗೆ ಮಹಜಾರ್ ಸಹ ಮಾಡುತ್ತಿದ್ದಾರೆ.
ಈ ಬಗ್ಗೆ ತಿಮ್ಮಯ್ಯ ಮನೆಯ ಬಾಗಿಲು ತೆಗೆದು ಮಾದ್ಯಮದವರನ್ನ ಕಂಡು ಇಲ್ಲಿ ಏಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿದ್ದು, ಕೊನೆಗೆ ಇನ್ನೂ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ ಎಂದು ಕ್ಷಣ ಮಾತ್ರದಲ್ಲಿ ಬಾಗಿಲು ಹಾಕಿಕೊಂಡರು.

See also  ಮೈಸೂರಿನ ವೀಳ್ಯದೆಲೆ ಬೆಳೆಗಾರರಿಗೆ ಜಮೀನು ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ: ಸಚಿವ ಮಹದೇವಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು