News Kannada
Friday, December 02 2022

ಮೈಸೂರು

ರಾಯರ ಆರಾಧನೆಯಲ್ಲಿ ತುಳಸಿಗಿಡ ವಿತರಣೆ

Photo Credit :

ರಾಯರ ಆರಾಧನೆಯಲ್ಲಿ ತುಳಸಿಗಿಡ ವಿತರಣೆ

ಮೈಸೂರು: ರಾಘವೇಂದ್ರ ಸ್ವಾಮಿಗಳ 346ನೇ ವರ್ಷದ ಆರಾಧನಾ ಮಹೋತ್ಸವದ ಹಿನ್ನಲೆಯಲ್ಲಿ ನಗರದ ಅರಿವು ಸಂಸ್ಥೆಯ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಕ್ತಾಧಿಗಳಿಗೆ ಉಚಿತವಾಗಿ ತುಳಸಿಗಿಡ ಮತ್ತು ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಲಾಯಿತು.ತುಳಸಿ ಗಿಡ ಮತ್ತು ಪುಸ್ತಕ ವಿತರಿಸಿ ಮಾತನಾಡಿದ ಮೈಸೂರು ನಗರ-ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಡಿಟಿ.ಪ್ರಕಾಶ್ ರವರು ಮಾತನಾಡಿ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗ ಕಾಮಧೇನು, ಕಲ್ಪವೃಕ್ಷ ದ ರೀತಿ ನಂಬಿದ ಎಲ್ಲ ಭಕ್ತರಿಗೆ ಜಾತಿ ಭೇದವಿಲ್ಲದೇ ವರ ಕರುಣಿಸೋ ದೇವಾಂಶ ಸಂಭೂತರು ಇಂತಹ ರಾಯರ ಜೀವನ ಚರಿತ್ರೆ ಓದುವಂತೆ ಹೇಳಿದರು. ನರಸಿಂಹರಾಜ ಕ್ಷೇತ್ರದ ಬಿಜೆಪಿ ಮುಖಂಡರಾದ ಗಿರಿಧರ್ ಮಾತನಾಡಿ ತುಳಸಿಗಿಡವು ಹಿಂದೂ ಧರ್ಮದಲ್ಲಿನ ಜನರಿಗೆ ಅವಿಭಾಜ್ಯ ಅಂಗ ಮತ್ತು ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ ಹಾಗೆಯೇ ತುಳಸಿಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಅಂದಿನ ದಿನಗಳಲ್ಲಿ ರಾಯರು ಕೂಡ ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು ಎಂದು ಹೇಳಿದರು.ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಪ್ರಶಾಂತ್ ಗೌಡ, ಎಸ್.ಬಿ.ಎಂ.ಮಂಜು, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ವಿಕ್ರಮ್ ಅಯ್ಯಂಗಾರ್, ಪ್ರಶಾಂತ್ ಆನಂದ್, ಕಾರ್ತಿಕ್, ಪ್ರಹ್ಲಾದ್, ರಂಗನಾಥ್, ಸಂದೇಶ್ ಇನ್ನಿತರರು ಇದ್ದರು.

See also  ಓವರ್ ಟೇಕ್ ಬರದಲ್ಲಿ ನಿಯಂತ್ರಣ ತಪ್ಪಿ ತೋಟಕ್ಕೆ ನೂಗ್ಗಿದ ಬಸ್...ಆರು ಜನರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು