News Kannada
Sunday, November 27 2022

ಮೈಸೂರು

ಶೂ ಧರಿಸಿಯೇ ಗಜಪಡೆಗೆ ಪುಷ್ಪಾರ್ಚನೆ ಮಾಡಿದ ಜಿಲ್ಲಾ ಉಸುವಾರಿ ಸಚಿವರು…ಸಾರ್ವಜನಿಕರಿಂದ ಆಕ್ರೋಶ - 1 min read

Photo Credit :

ಶೂ ಧರಿಸಿಯೇ ಗಜಪಡೆಗೆ ಪುಷ್ಪಾರ್ಚನೆ ಮಾಡಿದ ಜಿಲ್ಲಾ ಉಸುವಾರಿ ಸಚಿವರು...ಸಾರ್ವಜನಿಕರಿಂದ ಆಕ್ರೋಶ

ಮೈಸೂರು: ಸಂಪ್ರದಾಯಕ ಹಾಗೂ ಧಾರ್ಮಿಕ ಇತಿಹಾಸವುಳ್ಳ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಶೂಧರಿಸಿಯೇ ಪುರ್ಷಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಹೊಸ ವಿವಾದವನ್ನ ಉಂಟುಮಾಡಿದ್ದಾರೆ.

ದಸರಾ ತನ್ನದೇ ಆದ ಧಾರ್ಮಿಕ ಹಾಗೂ ಸಂಪ್ರದಾಯಕ ಹಿನ್ನಲ್ಲೆಯುಳ್ಳ ನಾಡಹಬ್ಬವಾಗಿದ್ದು, ಇದು ಚಾಮುಂಡಿ ತಾಯಿಯ ಹಬ್ಬವೆಂದೇ ಹಳೇ ಮೈಸೂರು ಭಾಗದಲ್ಲಿ ಪ್ರಸಿದ್ದವಾಗಿದ್ದು ಈ ದಸರಾದಲ್ಲಿ ಪಾಲ್ಗೊಳುವ ದಸರಾ ಆನೆಗಳು ಈ ದೇವರ ಪ್ರತಿರೂಪವಾಗಿದೆ. ಆನೆಯ ಮೇಲೆ ನಾಡ ಅದಿದೇವತೆ ಚಾಮುಂಡಿ ತಾಯಿಯ ಚಿನ್ನದ ಅಂಬಾರಿಯನ್ನ ಇಟ್ಟು ಪೂಜೆ ಸಲ್ಲಿಸುತ್ತಾರೆ.

ದಸರಾದ ಮೊದಲ ಹಂತವಾಗಿ ಕಾಡಿನಿಂದ ನಾಡಿಗೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸುವ ಮೂಲಕ ಗಜ ಪಡೆಯನ್ನ ಅರಮನೆಗೆ ಬರಮಾಡಿಕೊಳ್ಳುವುದು ಸಂಪ್ರದಾಯ. ಇಂತಹ ಸಂಪ್ರದಾಯದ ಪೂಜೆಯ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಗಜ ಪಡೆಗೆ ಪುಷ್ಪಾರ್ಚೆನ ಹಾಗೂ ದೀಪ ಬೆಳಗುವ ಸಂಧರ್ಭದಲ್ಲಿ ಶೂ ಧರಿಸಿ ಪುಷ್ಪಾರ್ಚೆನೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದ್ದು ಇಂತಹ ಸಂದರ್ಭದಲ್ಲಿ ಸಚಿವರು ತಮ್ಮ ಶೂವನ್ನ ತೆಗೆಯಬೇಕಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

See also  ಕಬಿನಿಯಿಂದ ತಮಿಳುನಾಡಿಗೆ ನೀರು: ಕನ್ನಡ ಚಳುವಳಿಗಾರರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು