News Kannada
Tuesday, November 29 2022

ಮೈಸೂರು

ಕುದುರೆ ಏರಿದ ಸಚಿವ ತನ್ವೀರ್ ಸೇಠ್, ತಮಟೆ ಶಬ್ದಕ್ಕೆ ಓಡಲು ಯತ್ನಿಸಿದ ಕುದುರೆ - 1 min read

Photo Credit :

ಕುದುರೆ ಏರಿದ ಸಚಿವ ತನ್ವೀರ್ ಸೇಠ್, ತಮಟೆ ಶಬ್ದಕ್ಕೆ ಓಡಲು ಯತ್ನಿಸಿದ ಕುದುರೆ

ಮೈಸೂರು- ಟಿಪ್ಪು ಸುಲ್ತಾನ್ 225ನೇ ಉರುಸು ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಪೇಟಾ ಧರಿಸಿ ಕುದುರೆ ಏರಿ ಹೊರಟ ಸಂದರ್ಭದಲ್ಲಿ ಕುದುರೆ ಗಾಬರಿಯಿಂದ ಕುಣಿದಾಡಿದ್ದು ಈ ಸಂದರ್ಭದಲ್ಲಿ ಸಚಿವರೇ ಗಾಬರಿಯಾದ ಪ್ರಸಂಗ ಅವರ ಮನೆಯ ಮುಂದೆ ನಡೆಯಿತು.

ನಿನ್ನೆ ಉದಯಗಿರಿಯ ಅವರ ಸ್ವಗೃಹದಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ಟಿಪ್ಪುಸುಲ್ತಾನ್ 225ನೇ ಉರುಸು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವ ತನ್ವೀರ್ ಸೇಠ್ ಹೊರಡುವ ಸಂದರ್ಭಲ್ಲಿ ಟಿಪ್ಪು ವೇಷಾಭೂಷಣ ಹಾಗೂ ಪೇಟಾ ಧರಿಸಿ ಕುದುರೆ ಏರಿ ಹೊರಟರು. ಆ ಸಂದರ್ಭದಲ್ಲಿ ತಮಟೆ ಹಾಗೂ ಮೈಕ್ ಶಬ್ದಕ್ಕೆ ಕುದುರೆ ಗಾಬರಿಯಾಗಿ ಓಡಲು ಯತ್ನಿಸಿತ್ತು. ಆಗ ಸಚಿವರೇ ಗಾಬರಿಯಿಂದ ಸಹಾಯಕ್ಕಾಗಿ ಆಪ್ತರನ್ನ ಕರೆದು ತಕ್ಷಣ ಬಂದ ಆಪ್ತರು ಕುದುರೆಯ ಲಾಗಮನ್ನ ಗಟ್ಟಿಯಾಗಿ ಹಿಡಿದು ಸಚಿವರನ್ನ ಕುದುರೆಯಿಂದ ಕೆಳಗೆ ಇಳಿಸಿದರು.

ಇದೇ ಸಂಧರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಭಾರತದ ಮೊದಲ ಸ್ವತಂತ್ರ ಸೇನಾನಿ ಟಿಪ್ಪು ಸುಲ್ತಾನ್ ಟಿಪ್ಪು ಸುಲ್ತಾನ್ ಅವರ 225ನೇ ಉರುಸು ಕಾರ್ಯಕ್ರಮವನ್ನ ಇಂದು ಆತನ ಹಿಂದಿನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಿದ್ದು, ಈ ಸಂಧರ್ಭದಲ್ಲಿ ಟಿಪ್ಪು ಭಾರತದ ಮೊದಲ ಆಧುನಿಕ ವಿಜ್ಞಾನಿಇದ್ದಂತೆ ಎಂದು ಬಣ್ಣಿಸಿದರು.  

See also  ಅರಮನೆಯಲ್ಲಿ ದಸರಾ ಗಜಪಡೆಗಳಿಗೆ ಭವ್ಯ ಸ್ವಾಗತ: ಇನ್ಮುಂದೆ ದಸರಾ ಮೆರಗು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು