News Kannada
Friday, December 02 2022

ಮೈಸೂರು

ಹಾಡಹಗಲೇ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ: ಚಾಲಕನ ಕೈಕಚ್ಚಿ ಪಾರದ ಗಟ್ಟಿಗಿತ್ತಿ ಹೆಣ್ಣು

Photo Credit :

ಹಾಡಹಗಲೇ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ: ಚಾಲಕನ ಕೈಕಚ್ಚಿ ಪಾರದ ಗಟ್ಟಿಗಿತ್ತಿ ಹೆಣ್ಣು

ನಂಜನಗೂಡು: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಮಯಪ್ರಜ್ಞೆಯಿಂದ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಘಟನೆ ಬುಧವಾರ ನಂಜನಗೂಡಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಿವಾಸಿ ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಮ್ಯ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಯುವತಿ.

ವಿದ್ಯಾರ್ಥಿನಿ ರಮ್ಯಳ ಚಿಕ್ಕಪ್ಪ ಸತೀಶ್ ಬಿಎಂಟಿಸಿ ನೌಕರರಾಗಿದ್ದು ಆಕೆಗೆ ದೂರವಾಣಿ ಕರೆ ಮಾಡಿ ನಾನು ನಂಜನಗೂಡಿಗೆ ಬಸ್ ಟ್ರಿಪ್ಗಾಗಿ ಬರುತ್ತಿದ್ದೇನೆ ನಿನ್ನನ್ನು ನೋಡಬೇಕು ಆದ್ದರಿಂದ ನೀನು ಚಾಮರಾಜನಗರದಿಂದ ನಂಜನಗೂಡಿಗೆ ಬಾ ಎಂದು ಹೇಳಿದ್ದರು. ಅದರಂತೆ ಆಕೆ ತನ್ನ ಚಿಕ್ಕಪ್ಪನನ್ನು ನೋಡಲು ಚಾಮರಾಜನಗರದ ಕಾಲೇಜಿನ ಹಾಸ್ಟೆಲ್ನಿಂದ ನಂಜನಗೂಡಿಗೆ ಬಸ್ನಲ್ಲಿ ಬಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಬಳಿ ಚಿಕ್ಕಪ್ಪನಿಗಾಗಿ ಕಾಯುತ್ತಿದ್ದಳು.

ಈ ವೇಳೆ ಸ್ಕಾರ್ಫಿಯೋ(ಕೆಎ10ಎಂ7070) ವಾಹನದಲ್ಲಿ ಒಬ್ಬ ಮಹಿಳೆ ಮತ್ತು ಚಾಲಕ ಬಂದಿದ್ದು, ಅವರು ಆಕೆಯನ್ನು ಮಾತಿಗೆಳೆದು ವಿಚಾರ ತಿಳಿದುಕೊಂಡು ಬಳಿಕ ನಿಮ್ಮ ಚಿಕ್ಕಪ್ಪ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ನಿನಗಾಗಿ ಕಾಯುತ್ತಿದ್ದು ಬಾ ಹೋಗೋಣ ಎಂದು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಆರ್ಪಿ ರಸ್ತೆಯಲ್ಲಿ ಸಾಗುವ ವೇಳೆ ಮಾರ್ಗ ಮಧ್ಯೆ ಮಹಿಳೆ ವಾಹನದಿಂದ ಇಳಿದು ನೀವು ಹೋಗಿ ನಾನು ಬರುತ್ತೇನೆಂದು ಹೇಳಿದ್ದಾಳೆ.

ಚಾಲಕ ಹುಲ್ಲಹಳ್ಳಿ ರಸ್ತೆಗೆ ಹೋಗುವ ಬದಲು ಗುಂಡ್ಲುಪೇಟೆ ಕಡೆಗೆ ವಾಹನ ಚಲಾಯಿಸಿದಾಗ ಅನುಮಾನಗೊಂಡ ವಿದ್ಯಾರ್ಥಿನಿ ಏಕೆ ಈ ಕಡೆಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಚಾಲಕ ಬಾಯಿ ಮುಚ್ಚಿಕೊಂಡು ಕುಳಿತುಕೋ ಎಂದು ಹೆದರಿಸಿದ್ದಾನೆ.ಇದರಿಂದ ಭಯಭೀತಗೊಂಡ ವಿದ್ಯಾರ್ಥಿನಿ ಪೊಲೀಸ್ ಕ್ವಾಟ್ರಸ್ ಬಳಿ ಚಾಲಕನ ಕೈಯನ್ನು ಕಚ್ಚಲು ಹೋಗಿ ಆತ ಗಾಬರಿಗೊಂಡು ಎಡ ಭಾಗದ ಪೊಲೀಸ್ ಕ್ವಾಟ್ರಸ್ ಕಡೆಗೆ ವಾಹನವನ್ನು ತಿರುಗಿಸಿದಾಗ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಕ್ಕೆ ಜಿಗಿದು ನಿಂತಿದೆ. ಆಗ ಗಾಬರಿಗೊಂಡ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ನಂತರ ವಿದ್ಯಾರ್ಥಿನಿ ರಮ್ಯ ಪಕ್ಕದಲ್ಲೇ ಇರುವ ಗ್ರಾಮಾಂತರ ಠಾಣೆಗೆ ತೆರಳಿ ವಿಷಯ ಮುಟ್ಟಿಸಿದ್ದು, ತಕ್ಷಣ ನಂಜನಗೂಡು ಪಟ್ಟಣ ಠಾಣೆಯ ಪಿಎಸೈ ಸವಿ, ಅಪರಾಧ ವಿಭಾಗದ ಪಿಎಸೈ ವೀರಭದ್ರ್ರಪ್ಪ, ಸಿಪಿಐ ಗೋಪಾಲಕೃಷ್ಣ, ಮೊಹಮ್ಮದ್ ಸುಜೀತಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾಥರ್ಿನಿಯ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

See also  ವರುಣಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಮತಯಾಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು