News Kannada
Friday, December 02 2022

ಮೈಸೂರು

ಭಾರತ ಬ್ರಿಟಿಷರ ಗುಲಾಮಗಿರಿಗೆ ಸಿಲುಕಿದ್ದು ದುರಂತ

Photo Credit :

ಭಾರತ ಬ್ರಿಟಿಷರ ಗುಲಾಮಗಿರಿಗೆ ಸಿಲುಕಿದ್ದು ದುರಂತ

ಮೈಸೂರು: ಒಗ್ಗಟ್ಟಿಲ್ಲದೆ ಒಳಜಗಳಗಳಿಂದಾಗಿ, ದ್ವೇಷಾಸೂಯೆಯ ಕದನಗಳಿಂದಾಗಿ ಹೊಟ್ಟೆಪಾಡಿಗೆ ವ್ಯಾಪಾರಕ್ಕೆ ಬಂದ ಬ್ರಿಟಿಷರ ಗುಲಾಮಗಿರಿಗೆ ಭಾರತ ಸಿಲುಕಿದ್ದು ಬಹುದೊಡ್ಡ ದುರಂತವೆಂದು ಸಾಹಿತಿ ಬನ್ನೂರು ಕೆ. ರಾಜು ವಿಷಾದ ವ್ಯಕ್ತಪಡಿಸಿದರು.

ಸುವರ್ಣ ಕರ್ನಾಟಕ ಜನಪರ ವೇದಿಕೆಯು ಯರಗನಹಳ್ಳಿಯ ಉರ್ದು ಶಿಕ್ಷಕರ ಬಡಾವಣೆಯಲ್ಲಿ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊರಗಿನ ಬ್ರಿಟಿಷರಿಂದ ದೇಶ ಸ್ವತಂತ್ರವಾಗಿದ್ದರೂ ಸಹ ಒಳಗಿನ ಆಳುವ ವರ್ಗದ ಭ್ರಷ್ಟಾಚಾರದ ಕಪಿಮುಷ್ಠಿಯಲ್ಲಿ ಭಾರತ ಇಂದಿಗೂ ಬಂಧಿಸಲ್ಪಟ್ಟಿದೆ. ಹಾಗಾಗಿ ನಿಜವಾದ ಆಂತರಿಕ ಸ್ವಾತಂತ್ರ್ಯ ಸಾಮಾನ್ಯ ಜನರಿಗೆ ಇನ್ನೂ ಲಭ್ಯವಾಗಿಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಹಣ, ಆಸ್ತಿಗಾಗಿ ಕಿತ್ತಾಟ, ಕಾದಾಟ, ದೇಶದ ಸಂಪನ್ಮೂಲವೆಲ್ಲ ಕೆಲವೇ ಮಂದಿ ಭ್ರಷ್ಟರ ಪಾಲಾಗುತ್ತಿದೆ.

ಇಡೀ ಜಗತ್ತನ್ನೇ ಸಾಕುವಷ್ಟು ಸಂಪನ್ಮೂಲ ನಮ್ಮ ದೇಶದಲ್ಲುಂಟು. ದುರಂತವೆಂದರೆ ಇಂತಹ ಸಂಪದ್ಭರಿತ ದೇಶದಲ್ಲಿ ಇಂದು ಬದುಕು ಕಟ್ಟಿ ಕೊಳ್ಳಲಾರದೆ ಭ್ರಷ್ಟಾಚಾರಕ್ಕೆ ಹೆದರಿ ಅದೆಷ್ಟೋ ಪ್ರತಿಭೆಗಳು ವಿದೇಶಗಳತ್ತ ಮುಖಮಾಡುತ್ತಿವೆ. ಇದಕ್ಕಿಂತ ವಿಪರ್ಯಾಸ ಬೇಕೆ? ಹೊರಗಿನ ಶತ್ರುಗಳಿಗಿಂತ ನಮ್ಮೊಳಗಿರುವ ಭ್ರಷ್ಟಾಚಾರದ ಭೂತದಿಂದ ನಮ್ಮ ಭಾರತ ದೇಶವನ್ನು ಉಳಿಸಬೇಕಾಗಿದೆ ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಬಿ. ಶ್ಯಾಮಸುಂದರ್ ಮತ್ತು ಅಂಧರಾಗಿದ್ದುಕೊಂಡೇ ಪಿ.ಎಚ್.ಡಿ. ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಉಪನ್ಯಾಸಕ ಡಾ. ಮಂಜುನಾಥ್ ಹಾಗೂ ಸಾಹಿತಿ ಬನ್ನೂರು ಕೆ. ರಾಜು ಅವರನ್ನು ವೇದಿಕೆ ವತಿಯಿಂದ ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ ಹಾರ ತುರಾಯಿಯೊಡನೆ ಶಾಲು ಹೊದಿಸಿ ಅತ್ಯಂತ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಸಾಹಿತಿ ಬಿ. ಶ್ಯಾಮಸುಂದರ್ ಅವರು ಇಂದಿನ ದಿನ ಮಾನಗಳಲ್ಲಿ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಮೌಲ್ಯ ಕಳೆದು ಕೊಳ್ಳುತ್ತಿವೆ. ಅರ್ಹರಿಗೆ ಸಿಗಬೇಕಾದ ಗೌರವಗಳನ್ನು ಅನರ್ಹರು ಲಾಭಿಮಾಡಿ ಕಿತ್ತುಕೊಳ್ಳುತ್ತಿದ್ದಾರೆ. ಕೀರ್ತಿ ಶನಿಯಿಂದ ದೂರವಿರಿ ಎಂದ ವಿಶ್ವಕವಿ ಕುವೆಂಪು ಅವರ ಮಾತು ಇಂದು ಯಾರಿಗೂ ಅರ್ಥವಾಗುತ್ತಿಲ್ಲ. ವಿಶ್ವವಿದ್ಯಾನಿಲಯಗಳೂ ಕೂಡ ಈಗ ಮೊದಲಿನಂತಿಲ್ಲ. ಹಣಕೊಟ್ಟರೆ ಕಳ್ಳ ಡಿಗ್ರಿಗಳು, ಡಾಕ್ಟರೇಟ್ಗಳು ಸಿಗುತ್ತವೆ. ವಿದ್ಯೆ ಇಂದು ವ್ಯಾಪಾರವಾಗಿದ್ದು ಗುರು ಸ್ಥಾನಕ್ಕೆ ನಾಲಾಯಕ್ ಆದವರೇ ಹೆಚ್ಚಿದ್ದಾರೆ ಎಂದು ವಿಷಾದಿಸಿದ ಅವರು ಬುದ್ಧಿ ಜೀವಿಗಳು, ವಿಚಾರವಂತರೆಂಬ ಸೋಗಿನಲ್ಲಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಇಂತಹ ಕಾಲದಲ್ಲೂ ಸುವರ್ಣ ಕನರ್ಾಟಕ ಜನಪರ ವೇದಿಕೆ ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿದೆಯೆಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮಾದೇಗೌಡ ಅವರು ಜ್ಯೋತಿ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸುವರ್ಣ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷೆ ಪಿ. ಲತಾಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ಸಂಸ್ಥಾಪಕ ಹೆಚ್.ಜಿ. ಗಿರಿಧರ್, ಎಸ್ಎಂಪಿ ಫೌಂಡೇಷನ್ ಅಧ್ಯಕ್ಷ ಎಸ್.ಎಂ. ಶಿವಪ್ರಕಾಶ್, ಗೌಡಾಸ್ ಹೋಟೆಲ್ ಮಾಲೀಕ ದೀಪಕ್, ಎಸ್.ಕೆ. ಗ್ರೂಪ್ಸ್ನ ವೈ.ಕೆ. ದಿನೇಶ್ಗೌಡ, ಗ್ರಾಪಂ ಸದಸ್ಯ ಬಸವರಾಜು, ಖ್ಯಾತ ವೈದ್ಯ ಡಾ. ಅನಿಲ್ ಥಾಮಸ್, ಮುಖಂಡರಾದ ಪಾಳ್ಯ ಸುರೇಶ್, ಶಿವಲಿಂಗೇಗೌಡ, ಅಶೋಕ್, ವೆಂಕಟೇಶ್, ವೇದಿಕೆ ಗೌರವಾಧ್ಯಕ್ಷ ಪಿ. ಎನ್. ಚಲುವರಾಜು, ಕಾರ್ಯದಶರ್ಿ ಸುಂದರ್ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರತಿಭಾವಂತ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

See also  ಕಂಬಳ ವಿಚಾರ.... ಫೆಬ್ರವರಿ 18ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದ ವಾಟಾಳ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು