News Kannada
Friday, December 02 2022

ಮೈಸೂರು

ಇದು ಕೆಸರುಗದ್ದೆಯಲ್ಲ…ಪಿರಿಯಾಪಟ್ಟಣ ಬಸ್ ಡಿಪೋ!

Photo Credit :

ಇದು ಕೆಸರುಗದ್ದೆಯಲ್ಲ...ಪಿರಿಯಾಪಟ್ಟಣ ಬಸ್ ಡಿಪೋ!

ಮೈಸೂರು: ಬಹುದಿನಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರ ಮುಂದಾದ ಕಾರಣ ಪಿರಿಯಾಪಟ್ಟಣದಲ್ಲಿ ಕೆಎಸ್ಆರ್ ಟಿಸಿ ಡಿಪೋ ಕೆಲ ತಿಂಗಳ ಹಿಂದೆಯಷ್ಟೆ ಉದ್ಘಾಟನೆ ಭಾಗ್ಯ ಕಂಡಿದೆ.

ಕಟ್ಟಡ ನಿರ್ಮಿಸಿ ಒಂದಷ್ಟು ಸೌಲಭ್ಯವನ್ನು ಕಲ್ಪಿಸಲಾಗಿದೆಯಾದರೂ ಇಲ್ಲಿ ಡಾಂಬರು ಹಾಕದ ಕಾರಣದಿಂದಾಗಿ ಮಳೆಗೆ ಕೆಸರು ತುಂಬಿ ಬಸ್ ಡಿಪೋನಾ ಅಥವಾ ಕೆಸರು ಗದ್ದೆಯಾ ಎಂಬ ಅನುಮಾನಗಳು ಹುಟ್ಟತೊಡಗಿವೆ.

ಮಳೆ ನೀರು ನಿಂತು ಕೆಸರಾಗುತ್ತಿದ್ದು ಅದರ ಮೇಲೆಯೇ ಬಸ್ಗಳು ಓಡಾಡುತ್ತಿದ್ದು, ಬಸ್ ಚಕ್ರದೊಂದಿಗೆ ಮಣ್ಣು ಕಿತ್ತು ಬರುತ್ತಿದೆ. ಇದರಿಂದ ಕೆಸರುಮಯವಾಗಿ ನಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲವನ್ನೂ ಸಂಪೂರ್ಣವಾಗಿ ಮಾಡದೆ ತರಾತುರಿಯಲ್ಲಿ ಮುಗಿಸಿದ್ದು, ಡಾಂಬರ್ ಹಾಕಿದ್ದರೆ ಈ ಸಮಸ್ಯೆ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಇಚ್ಚಾಸಕ್ತಿಯ ಕೊರತೆಯಿಂದ ಇದೀಗ ಇಲ್ಲಿಗೆ ತೆರಳುವ ಸಿಬ್ಬಂದಿ ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಚಾಲಕರು, ನಿರ್ವಾಹಕರು ಸೇರಿದಂತೆ ಡಿಪೋದಲ್ಲಿ ಕೆಲಸ ನಿರ್ವಹಿಸುವ ಎಲ್ಲರೂ ಮಳೆ ಸಂದರ್ಭಗಳಲ್ಲಿ ಕೆಸರಿನಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿಯೂ ಬಂದೊದಗಿದೆ.

ಡಿಪೋದಲ್ಲಿ ವಾಹನ ಸ್ವಚ್ಛಗೊಳಿಸುವ ಯಂತ್ರ, ಇಂಧನ ತುಂಬಿಸುವ ಡೀಸೆಲ್ ಪಂಪ್ ಸೇರಿದಂತೆ ಅಗತ್ಯ ವ್ಯವಸ್ಥೆಗಳಿದ್ದರೂ ಮಳೆ ಸಂದರ್ಭದಲ್ಲಿ ಡಿಪೋ ಆವರಣ ಸಂಪೂರ್ಣ ಕೆಸರುಮಯವಾಗುತ್ತಿದೆ. ಬಸ್ಗಳನ್ನು ಡಿಪೋದಿಂದ ಹೊರಗೆ ತೆಗೆಯುವಾಗ ಪ್ರಥಮ ತಪಾಸಣೆಗಾಗಿ ಆವರಣದಲ್ಲಿ ಚಲಾಯಿಸಿ ನೋಡುವುದು ವಾಡಿಕೆ ಪ್ರಸ್ತುತ ಆವರಣ ಕೆಸರು ಇರುವುದರಿಂದ ತಪಾಸಣೆ ಮಾಡುವುದು ಸಾಧ್ಯವಾಗದೆ ಚಾಲಕರು ಬಸ್ಗಳನ್ನು ಏಕಾಏಕಿ ಹೊರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇನ್ನು ಇಂಧನ ತುಂಬಿಸುವ ವೇಳೆ ಪಂಪ್ ಅಳವಡಿಸಿರುವ ಪ್ರದೇಶ ಏರಿಳಿತದಿಂದ ಕೂಡಿದ್ದು ಆ ಸ್ಥಳದಲ್ಲಿ ಬಸ್ ಚಾಲನೆಗೂ ಸಮಸ್ಯೆಯಾಗಿದೆ.

ಇನ್ನು ಬಸ್ ಸ್ವಚ್ಛಗೊಳಿಸಿದ ನಂತರ ಕೆಸರಿನಲ್ಲೇ ಕೊಂಡೊಯ್ಯಬೇಕಾಗಿರುವುದರಿಂದ ಶುಚಿಗೊಳಿಸುವುದಾದರೂ ಏಕೆ ಎಂಬಂತಾಗಿದೆ. ಆದ್ದರಿಂದ ಕೂಡಲೇ ಡಿಪೋ ಆವರಣವನ್ನು ಡಾಂಬರೀಕರಣ ಮಾಡಿ ಕೆಸರಿನಿಂದ ಮುಕ್ತಿಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಅದನ್ನು ಯಾವಾಗ ಮಾಡುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.

See also  ಮಂತ್ರ ಮಾಂಗಲ್ಯ ಮೂಲಕ ನವ ಜೀವನಕ್ಕೆ ಕಾಲಿಟ್ಟ ಜೋಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು