News Kannada
Tuesday, November 29 2022

ಮೈಸೂರು

ಸಾಲದಿಂದ ತಪ್ಪಿಸಿಕೊಳ್ಳಲು ಸತ್ತ ನಾಟಕದ ಕಥೆ ಕಟ್ಟಿದ ಕುಟುಂಬ..ಏನಿದು ಸ್ಟೋರಿ - 1 min read

Photo Credit :

ಸಾಲದಿಂದ ತಪ್ಪಿಸಿಕೊಳ್ಳಲು ಸತ್ತ ನಾಟಕದ ಕಥೆ ಕಟ್ಟಿದ ಕುಟುಂಬ..ಏನಿದು ಸ್ಟೋರಿ

ಮೈಸೂರು: ಸಾಲ ವಾಪಸ್ಸ್ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಾಲ ತೆಗೆದುಕೊಂಡ ವ್ಯಕ್ತಿಯೇ ಸತ್ತಿದ್ದಾನೆ ಎಂದು ಫೋನ್ ನಲ್ಲಿ ಕಥೆ ಕಟ್ಟಿದ ಕುಟುಂಬದ ವಿರುದ್ದ ಸಾಲ ನೀಡಿದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಗರದ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ: ನಗರದ ಅಗ್ರಾಹಾರದ ನಿವಾಸಿ ಶಿಲ್ಪ ಎಂಬುವವರು ಬೆಂಗಳೂರಿನ ಪರಿಚಯಸ್ಥ ಬಿ.ವಿ ಪ್ರೀತಮ್ ಎಂಬುವವರಿಗೆ 2009ರಲ್ಲಿ 13 ಲಕ್ಷ ಹಣವನ್ನ ಸಾಲವಾಗಿ ನೀಡಿದರು. ಸಾಲದ ಹಣವನ್ನ ಬ್ಯಾಂಕ್ ನ ಆರ್ ಟಿಜಿಎಸ್ ಮೂಲಕ ನೀಡಿದ್ದಳು. ಸಾಲ ಪಡೆದ ವ್ಯಕ್ತಿ ನಾಲ್ಕೈದು ವರ್ಷಗಳ ನಂತರ  ಬಡ್ಡಿ ಸಮೇತ ನೀಡುವುದಾಗಿ ಹೇಳಿ ಪಡೆದಿದ್ದ.ಆದರೆ ಇತ್ತೀಚಿಗೆ ಆತನ ಮೊಬೈಲ್ ಕರೆ ಮಾಡಿದಾಗ ಕರೆಯನ್ನ ಸ್ವೀಕರಿಸಿದ ಆತನ ಸೋದರ ಪ್ರೀತಮ್ ಇನ್ನಿಲ್ಲ, ಸತ್ತು ಹೋಗಿದ್ದಾನೆ ಎಂದು ಫೋನ್ ನಲ್ಲಿ ಹೇಳಿದ. ಅನುಮಾನಗೊಂಡ ಶಿಲ್ಪ ಬೆಂಗಳೂರಿನ ಅವರ ಮನೆಗೆ ಹೋ ಗಿ ನೋಡಿದಾಗ ಆತ ಬದುಕಿರುವುದು ಗೊತ್ತಾಗಿದೆ.

ಇದರಿಂದ ಕೋಪಗೊಂಡ ಶಿಲ್ಪ ಮೈಸೂರಿನ ಕೆ.ಆರ್ ಠಾಣೆಯಲ್ಲಿ ಆತ ಮತ್ತು ಆತನ ಕುಟುಂಬದ ವಿರುದ್ದ ವಂಚನೆ ದೂರು ದಾಖಲಿಸಿದ್ದಾರೆ.

 

See also  ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು