News Kannada
Monday, December 05 2022

ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ 2017: ಎರಡನೇ ತಂಡದ ದಸರಾ ಗಜಪಡೆ ಅರಮನೆಗೆ…

Photo Credit :

ವಿಶ್ವವಿಖ್ಯಾತ ಮೈಸೂರು ದಸರಾ 2017: ಎರಡನೇ ತಂಡದ ದಸರಾ ಗಜಪಡೆ ಅರಮನೆಗೆ...

ಮೈಸೂರು: ಅರಮನೆಯ ಜಯಮಾರ್ತಂಡ ಬಾಗಿಲಿನಿಂದ ಎರಡನೇ ತಂಡ ಎಂಟು ಆನೆಗಳನ್ನು ಅರಮನೆ ಮಂಡಳಿಯಿಂದ ಸಾಂಪ್ರಾದಾಯಕವಾಗಿ ಪೂಜೆ ಸಲ್ಲಿಸಿ ಗಜಪಡೆಯನ್ನು ಅರಮನೆಗೆ ಭರಮಾಡಿಕೊಳ್ಳಲಾಯಿತು.

ಕಾವಾಡಿಗಳು ಹಾಗೂ ಮಾವುತರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಇರುವ ಕಿಟ್ ವಿತರಣೆ ಮಾಡಿದರು. ಇದೇ ಸಂದರ್ಭ ಜಿಲ್ಲಾಧಿಕಾರಿ ಡಿ.ರಂಧೀಪ್ ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಅರ್ಜುನ ನೇತೃತ್ವದ 8 ಆನೆಗಳ ತಂಡ ಆಗಮಿಸಿತ್ತು. ಇಂದು ಎರಡನೇ ತಂಡ ಆಗಮಿಸಿದ್ದು, ಅರಮನೆ ಮಂಡಳಿಯಿಂದ ಸ್ವಾಗತಿಸಲಾಗಿದೆ.

ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿ ಸಾಂಪ್ರಾದಾಯಕವಾಗಿ ಭರಮಾಡಿಕೊಳ್ಳಲಾಗಿದೆ. ಆನೆಗಳು ಮತ್ತು ಮಾವುತರಿಗೆ ಈಗಾಗಲೇ ಶೆಡ್ ಗಳ ನಿರ್ಮಾಣ ಮಾಡಲಾಗಿದೆ. ಏಳು ಆನೆಗಳು ಬರಲಿದ್ದು, ಹತ್ತು ಮಾವುತರ ಕುಟುಂಬ ಆಗಮಿಸಿದ್ದಾರೆ. ದಸಾರೆ ಉತ್ಸವಕ್ಕೆ ಇದೀಗ 15 ಆನೆಗಳು ಅರಮನೆ ಆವರಣ ತಲುಪಿದೆ. ದಸರೆಗೆ ಇನ್ನೂ ಇಪ್ಪತ್ತು ದಿನಗಳು ಬಾಕಿ ಇದ್ದು ಈಗಾಗಲೇ ತಯಾರಿ ನಡೆಸಲಾಗುತ್ತಿದೆ ಎಂದರು.

ನಂತರ ಮೈಸೂರು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಲುಕುಂಡಲ ಮಾತನಾಡಿ ಎರಡನೇ ತಂಡದ ಆನೆಗಳು ಅರಮನೆಗೆ ಆಗಮಿಸಿವೆ. ಗೋಪಾಲಸ್ವಾಮಿ, ಕೃಷ್ಣ, ದ್ರೋಣ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ ಆನೆಗಳು ಆಗಮಿಸಲಿವೆ.

ಗೋಪಾಲಸ್ವಾಮಿ, ಕೃಷ್ಣ ದ್ರೋಣ ಮತ್ತಿಗೋಡು ಆನೆ ಶಿಬಿರದಿಂದ ಹಾಗೂ ವಿಕ್ರಮ, ಗೋಪಿ, ಹರ್ಷ, ಪ್ರಶಾಂತ ಆನೆಗಳನ್ನು ದುಬಾರೆ ಆನೆ ಶಿಬಿರದಿಂದ ಕರೆತರಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ 15 ಆನೆಗಳು ಪಾಲ್ಗೊಳ್ಳಲಿವೆ. ಎಲ್ಲಾ ಆನೆಗಳು ಕೂಡ ಆರೋಗ್ಯವಾಗಿದೆ. ಕಾವಾಡಿಗಳಿಗೆ ಮಾವುತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

See also  ಪ್ರತಿಭಟಿಸುತ್ತಿರುವವರು ಪಂಜಾಬ್‌ ನ ರೈತರು ಮಾತ್ರ: ಎಸ್‌ ಎಲ್‌ ಭೈರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು