News Kannada
Thursday, December 01 2022

ಮೈಸೂರು

ಅಂಬಾರಿ ಹೊರುವ ಅರ್ಜುನನಿಗೆ ಮರಳು ಮೂಟೆ ತಾಲೀಮು ಆರಂಭ

Photo Credit :

ಅಂಬಾರಿ ಹೊರುವ ಅರ್ಜುನನಿಗೆ ಮರಳು ಮೂಟೆ ತಾಲೀಮು ಆರಂಭ

ಮೈಸೂರು: ಅಂಬಾರಿಯ ತೂಕದ ಮರಳು ಮೂಟೆಯನ್ನ ಅರ್ಜುನ ಆನೆಗೆ ಕಟ್ಟಿ ಇಂದಿನಿಂದ ಜಂಬೂ ಸವಾರಿ ತಾಲೀಮನ್ನ ಅರಮನೆ ಆವರಣದಲ್ಲಿ ಆರಂಭಿಸಲಾಗಿದೆ. ಇಂದು 15 ಆನೆಗಳು ದಸರಾ ತಾಲೀಮಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳಲು ಗಜಪಯಣದ ಮೂಲಕ ಮೊದಲ ತಂಡದಲ್ಲಿ 8 ಆನೆಗಳು ಮತ್ತು ಎರಡನೇ ತಂಡದಲ್ಲಿ 7 ಆನೆಗಳು ಸೇರಿದಂತೆ ಒಟ್ಟು 15 ಆನೆಗಳು ಅರಮನೆ ಪ್ರವೇಶಿಸಿದ್ದು ಇಂದಿನಿಂದ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಎಲ್ಲಾ ಆನೆಗಳಿಗೂ ತಾಲೀಮು ಆರಂಭಿಸಲಾಯಿತು. ಇಂದು ಬೆಳಗ್ಗೆ ಗಜಪಡೆಗಳಿಗೆ ಹಾಗೂ ಮರಳು ಮೂಟೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗಜ ಪಡೆಯ ಕ್ಯಾಪ್ಟನ್ ಹಾಗೂ ಅಂಬಾರಿ ಹೊರುವ ಅರ್ಜುನನ ಬೆನ್ನಿಗೆ ಸುಮಾರು 350 ಕೆ.ಜಿ ತೂಕದ ಮರಳು ಮೂಟೆಯನ್ನ ಹಾಕುವ ಮೂಲಕ ತಾಲೀಮು ಆರಂಭಿಸಿದ್ದು, ಅರಮನೆಯಿಂದ ತಾಲೀಮು ಆರಂಭಿಸಿ ಬನ್ನಿಮಂಟಪ ತಲುಪಿದವು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಏಡುಕುಂಡಲ, ಇಂದಿನಿಂದ ಗಜಪಡೆಗಳಿಗೆ ಮರಳು ಮೂಟೆ ತಾಲೀಮು ಆರಂಭಿಸಲಾಗಿದೆ. ಅಂಬಾರಿ ಹೊರುವ ಅರ್ಜುನ ಆನೆಗೆ 350 ಕೆ.ಜಿ ತೂಕದ ಮರಳು ಮೂಟೆಯನ್ನ ಹಾಕಿ ಜಂಬೂ ಸವಾರಿಗೆ ತಾಲೀಮು ಆರಂಭಿಸಲಾಗಿದ್ದು, ಮುಂದಿನ ವಾರದಿಂದ ಮೂರು ದಿನಗಳಿಗೊಮ್ಮೆ 100 ಕೆ.ಜಿ ತೂಕವನ್ನ ಹೆಚ್ಚಿಸಿಕೊಂಡು 750 ಕೆ.ಜಿ ತೂಕ ತಲುಪುತ್ತೇವೆ. ಮುಂದಿನ ವಾರದಿಂದ ಮರದ ಅಂಬಾರಿ ಹಾಕುವ ಮೂಲಕ ಜಂಬೂ ಸವಾರಿಗೆ ತಾಲೀಮು ನಡೆಸಲಾಗುತ್ತದೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದರು.

See also  ಭಕ್ತರ ಸೂಗಿನಲ್ಲಿ ಬಂದು ಭಕ್ತೆಯ ಪರ್ಸ್ ಕದ್ದ ಕಳ್ಳಿ...ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು