News Kannada
Friday, December 02 2022

ಮೈಸೂರು

ಡಿಜಿಟಲ್ ಪಾವತಿ ಮೂಲಕ ಕುಸ್ತಿ ಪಟುಗಳಿಗೆ ಸಂಭಾವನೆ: ರವಿ ಡಿ. ಚೆನ್ನಣ್ಣನವರ್

Photo Credit :

ಡಿಜಿಟಲ್ ಪಾವತಿ ಮೂಲಕ ಕುಸ್ತಿ ಪಟುಗಳಿಗೆ ಸಂಭಾವನೆ: ರವಿ ಡಿ. ಚೆನ್ನಣ್ಣನವರ್

ಮೈಸೂರು: ನಾಡ ಹಬ್ಬ ದಸರಾದ ಕುಸ್ತಿ ಪಂದ್ಯಾವಳಿಗಳು ಸೆಪ್ಟೆಂಬರ್ 21 ರಿಂದ 26ರವರೆಗೆ ನಡೆಯಲಿದ್ದು, ಕುಸ್ತಿ ಪಟುಗಳಿಗೆ ಅವರ ಸಂಭಾವನೆಯನ್ನ ಡಿಜಿಟಲ್ ಪಾವತಿ ಮೂಲಕ ನೀಡಲು ನಿರ್ಧರಿಸಲಾಗಿದೆ ಎಂದು ದಸರಾ ಕುಸ್ತಿಯ ಉಪ ವಿಶೇಷಾಧಿಕಾರಿಯಾಗಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯೂ ವಸ್ತು ಪ್ರದರ್ಶನ ಪಕ್ಕದಲ್ಲಿರುವ ದೇವರಾಜ ಅರಸು ವಿವಿದೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು, ನಾಡಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೈಸೂರಿನ ನಾಲ್ಕು ದಿಕ್ಕುಗಳಲ್ಲಿ ಕುಸ್ತಿ ಪಂದ್ಯಾವಳಿ, ೨ ವಿಭಾಗಗಳಲ್ಲಿ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.ಜೊತೆಗೆ ಕುಸ್ತಿ ಪಟುಗಳಿಗೆ ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆ, ಎರಡೂ ಕೈಗಳಿಂದ ಗದೆ ತಿರುಗಿಸುವ ಸ್ಪರ್ಧೆ, ದಂಡ ಮತ್ತು ಸಪೋರ್ಟ್ ಹೊಡೆಯುವ ಸ್ಪರ್ಧೆ, ಗರ್ಧನ್ ಕಲ್ಲು ಎತ್ತಿಕೊಂಡು ಬಸ್ಕಿ ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಮಹಿಳಾ ಹಾಗೂ ಪುರುಷ ಕುಸ್ತಿ ಪಟುಗಳಿಗೆ ಪಂಜ ಕುಸ್ತಿಯನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.

ಅಲ್ಲದೆ ಈ ಬಾರಿ ರಾಷ್ಟ್ರೀಯ ಕುಸ್ತಿ ಸ್ಪರ್ಧೆ ಇರುವುದಿಲ್ಲ. ಬದಲಾಗಿ ಅಹ್ವಾನಿತ ರಾಷ್ಟ್ರೀಯ ಕುಸ್ತಿ ಪಟ್ಟುಗಳ ಕುಸ್ತಿ ಇರುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಮೊದಲ ಬಾರಿಗೆ ಡಿಜಿಟಲ್ ವ್ಯವಸ್ಥೆ: ಮಿತವ್ಯಯ ಹಾಗೂ ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಟಿಜಿಟಲ್ ಪಾವತಿ ಮೂಲಕ ಕುಸ್ತಿ ಪಟುಗಳಿಗೆ ಸಂಭಾವನೆ ನೀಡಲಾಗುವುದು. ಕಳೆದ ಬಾರಿಯಂತೆ  ಈ ಬಾರಿಯೂ ಸಂಭಾವಣೆ ಇರಲಿದೆ. ಕುಸ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಗರಡಿ ಮನೆಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡಲಾಗುವುದು. ಕುಸ್ತಿಯನ್ನೇ ವೃತ್ತಿಯಾಗಿಸಿಕೊಂಡಿರುವ ಯುವಕರಿಗೆ ಉಚಿತ ಊಟ ವಸತಿಯೊಂದಿಗೆ ಒಂದು ವರ್ಷ ತರಬೇತಿ ನೀಡಲಾಗುವುದು.

See also  ಮಂಡ್ಯ ಲೋಕಸಭಾ ಜೆಡಿಎಸ್ ಅಭ್ಯಥಿಯಾಗಿ ನಿಖಿಲ್ ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು