News Kannada
Saturday, November 26 2022

ಮೈಸೂರು

ಸೆ.21ರಿಂದ ದಸರಾ ಕುಸ್ತಿ ಪಂದ್ಯಾವಳಿ - 1 min read

Photo Credit :

ಸೆ.21ರಿಂದ ದಸರಾ ಕುಸ್ತಿ ಪಂದ್ಯಾವಳಿ

ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ನಡೆಯುವ ಕುಸ್ತಿ ಪಂದ್ಯಾವಳಿ ನಗರದ ಡಿ. ದೇವರಾಜ ಅರಸು ವಿವಿಧೋದ್ಧೇಶ ಕ್ರೀಡಾಂಗಣದಲ್ಲಿ ಸೆ.21 ರಿಂದ ಆರಂಭವಾಗಲಿದೆ.

ಈ ಕುರಿತು ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಮಾಹಿತಿ ನೀಡಿ ಸೆಪ್ಟಂಬರ್ 21 ರಿಂದ 26 ರವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ವಿಶೇಷವಾಗಿ ಪಾರದರ್ಶಕತೆಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಮೊದಲ ಬಾರಿಗೆ ಸ್ಥಳೀಯ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಗರದ ನಾಲ್ಕು ದಿಕ್ಕಿನಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನದ ನಾಡ ಕುಸ್ತಿ ಆಯೋಜಿಸಲಾಗುತ್ತಿದೆ. ಪ್ರಾಯೋಜಕರ ಮೂಲಕ ಬಹುಮಾನವನ್ನು ನೀಡಲಿದ್ದೇವೆ ಎಂದು ತಿಳಿಸಿದರು. ಮೊದಲನೇ ಪಂಜ ಕುಸ್ತಿಯನ್ನು ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಸಲು ಸಿದ್ಧ್ದತೆಗಳು ನಡೆದಿದೆ ಎಂದರು.

ರಾಜ್ಯಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯಾವಳಿಯನ್ನು ಸೆ.24 ಮತ್ತು 25 ರಂದು ನಡೆಯಲಿದೆ ಎಂದು ತಿಳಿಸಿದರು. ಇದರೊಂದಿಗೆ ಕುಸ್ತಿ ಪುನಃಚೇತನ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಗರಡಿಗಳನ್ನು ಗುರುತಿಸಿ ಜೀರ್ಣೋದ್ದಾರಕ್ಕೆ ಕ್ರಮ ತೆಗೆದುಕೊಳ್ಳವುದು ಸೇರಿದೆ ಎಂದು ತಿಳಿಸಿದರು.

ಉಪಸಮಿತಿಯ ಕಾರ್ಯಾಧ್ಯಕ್ಷರು ಮತ್ತು ನಂಜನಗೂಡು ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜಿತ ಹಾಗೂ ಕಾರ್ಯದರ್ಶಿ ಡಿ. ರವಿ ಅವರು ಹಿರಿಯ ಕುಸ್ತಿ ಪೈಲ್ವಾನರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

See also  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಕಪ್ಪು ಪಟ್ಟಿ ಧರಿಸಿ ಮೈಸೂರು ಪತ್ರಕರ್ತರ ಮೌನ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು