News Kannada
Monday, November 28 2022

ಮೈಸೂರು

ಮೈಸೂರು: ಪ್ರೀತಿಸಲು ನಿರಾಕರಿಸಿದ ವಿಧವೆ ಮೇಲೆ ಹಲ್ಲೆ, ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ - 1 min read

Photo Credit :

ಮೈಸೂರು:  ಪ್ರೀತಿಸಲು ನಿರಾಕರಿಸಿದ ವಿಧವೆ ಮೇಲೆ ಹಲ್ಲೆ, ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ವಿಧವೆಯನ್ನ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 1.10 ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ.

ಘಟನೆ ಹಿನ್ನಲ್ಲೆ: ಪ್ರಕಾಶ(31) ಎಂಬಾತನೆ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಈತ ಭವ್ಯ ಎಂಬ ವಿಧವೆಯನ್ನ 2014ರ ಡಿಸೆಂಬರ್ 30ರಂದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ. ಭವ್ಯ ಮೂಲತಃ ಮೈಸೂರು ತಾಲೂಕಿನ ಮಾವಿನಹಳ್ಳಿಯವಳಾಗಿದ್ದು ನಂಜನಗೂಡು ತಾಲೂಕಿನ ದೇವನರನಹಳ್ಳಿಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ವಿವಾಹವಾಗಿ ಮೂರು ತಿಂಗಳಿಗೆ ಅನಾರೋಗ್ಯದಿಂದ ಪತಿ ನಿಧನರಾಗಿದ್ದರು.

ಇದರಿಂದ ಭವ್ಯ ಮಾವಿನಹಳ್ಳಿಯ ತನ್ನ ತವರು ಮನೆಗೆ ವಾಪಸ್ಸ್ ಬಂದು ತಾಯಿಯೊಂದಿಗೆ ವಾಸವಿದ್ದಳು. ಜೀವನ ನಿರ್ವವಣೆಗಾಗಿ ಬೆಳವಾಡಿಯ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಕಾರ್ಖಾನೆಯ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಪರಿಚಯವಾಗಿದ್ದು, ಪ್ರೀತಿಸುವಂತೆ ಭವ್ಯಳ ಹಿಂದೆ ಬಿದ್ದು ದಿನನಿತ್ಯ ಫೋನ್ ಮಾಡಿ  ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ.

ಇದರಿಂದ ಮನನೊಂದ ಭವ್ಯ ಕೆಲಸ ತೊರೆದು ಮನೆಯಲ್ಲಿಯೇ ಉಳಿದಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಪ್ರಕಾಶ್  ಭವ್ಯ ಮನೆಯಲ್ಲಿ ಒಂಟಿಯಾಗಿದ್ದ ಸಮಯದ ನೋಡಿ ಮಾವಿನಹಳ್ಳಿಗೆ ಬಂದು ಮನೆಯ ಬಾಗಿಲು ತಟ್ಟಿದ್ದಾನೆ, ಆದರೆ ಭವ್ಯಾ ಮನೆಯ ಬಾಗಿಲು ತೆಗೆಯಲಿಲ್ಲ. ಹೊರಗಿನಿಂದ ಚಿಲಕ ಹಾಕಿದ ಪ್ರಕಾಶ್ ಮನೆಯ ಹೆಂಚೆ ತೆಗೆದು ಮನೆಯೊಳಗೆ ಇಳಿದು ಮಚ್ಚಿನಿಂದ 8 ಬಾರಿ ಹಲ್ಲೆ ಮಾಡಿದ್ದಾನೆ.

ಮಹಿಳೆಯ ಕೂಗಾಟ ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಹಲ್ಲೆ ನಡೆಸಿ ಪ್ರಕಾಶ್ ಪರಾರಿಯಾಗಿದ್ದು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಚಿಕಿತ್ಸೆ ಕೊಡಿಸಿದ್ದರು.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಮಹೇಶನನ್ನ ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷವನ್ನ ಸಂತ್ರಸ್ತ ಮಹಿಳೆಗೆ ಹಾಗೂ 10 ಸಾವಿರವನ್ನ ಪ್ರಾಸಿಕೂಷನ್ ವೆಚ್ಚಕ್ಕೆ ನೀಡುವಂತೆ ಆದೇಶ ನೀಡಿದೆ.

 

 

 

 

 

See also  ಇಂದಿನಿಂದ ನಾಗರಹೊಳೆಯಲ್ಲಿ ಹುಲಿ ಗಣತಿ: 176 ಕ್ಯಾಮೆರಾ ಫಿಕ್ಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು