News Kannada
Wednesday, October 05 2022

ಮೈಸೂರು

ಚಾಮುಂಡಿ ತಾಯಿ ದರ್ಶನಕ್ಕೆ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿ ಆರಂಭ - 1 min read

Photo Credit :

ಚಾಮುಂಡಿ ತಾಯಿ ದರ್ಶನಕ್ಕೆ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿ ಆರಂಭ

ಮೈಸೂರು: ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು ಚಾಮುಂಡಿ ತಾಯಿಯ ದರ್ಶನಕ್ಕೆ ಇನ್ಮುಂದೆ ಸರತಿ ಸಾಲಿನ ನಿಲುವ ಅವಶ್ಯಕತೆ ಇಲ್ಲ. ಏಕೆಂದರೆ ಚಾಮುಂಡಿ ಬೆಟ್ಟಕ್ಕೆ ಹೈಟೆಕ್ ಸ್ಪರ್ಷ ನೀಡಲು ಜಿಲ್ಲಾಡಳಿತ ಮುಂದಾಗಿದ್ದು, ಆನ್ ಲೈನ್ ಮೂಲಕವೇ ದೇವಾಲಯ ಪ್ರವೇಶಕ್ಕಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ನಾಡ ಅದಿ ದೇವತೆ ಚಾಮುಂಡಿ ತಾಯಿಯ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಗಂಟೆ ಗಂಟೆಗಲ್ಲೇ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಾರೆ. ಇದನ್ನ ತಪ್ಪಿಸಲು ಮೈಸೂರು ಜಿಲ್ಲಾಡಳಿತ ಚಾಮುಂಡಿ ಬೆಟ್ಟಕ್ಕೆ ಹೈಟೆಕ್ ಸ್ಪರ್ಷ ನೀಡಿದ್ದು, ದೇವಾಲಯ ಪ್ರವೇಶ ಹಾಗೂ ಇನ್ನಿತರ ಸೇವೆಗಳಿಗಾಗಿ ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಲೋಕಾರ್ಪಣೆಗೊಳಿಸಿದರು.

www.chamundeshwaritemple.in ಗೆ ಲಾಗ್ ಇನ್ ಆಗಿ ಅಲ್ಲಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಹಾಗೂ ಬೇಕಾಗಿರುವ ಟಿಕೆಟ್ ಗಳ ಸಂಖ್ಯೆ ನಮೂದಿಸಿ ಕ್ರೆಡಿಟ್, ಡೆಬಿಟ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸಬಹುದು, ಇಲ್ಲವೇ ಕಾಯ್ದಿರಿಸಬಹುದು. ಈ ರೀತಿ ಖರೀದಿಸಿದ ಟಿಕೆಟ್ ಗಳು ಇ-ಮೇಲ್ ಅಥವಾ ಎಸ್ ಎಂಎಸ್ ಮೂಲಕ ಬರುತ್ತವೆ. ಇವುಗಳನ್ನ ಪ್ರವೇಶದ್ವಾರದಲ್ಲಿ ತೋರಿಸಿ ಪ್ರವೇಶಿಸಬಹುದು. ಎಸ್ ಎಂಎಸ್ ಮೂಲಕ ಬಂದ ಟಿಕೆಟ್ ಗಳನ್ನ ಮೊಬೈಲ್ ಆಪ್ ಮೂಲಕ ಸ್ಕಾನ್ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ವೆಬ್ ಸೈಟ್ ನಲ್ಲಿ ಪ್ರವೇಶ ಪಡೆಯಬಹುದು. ಮರು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಡಿ.ರಂದೀಪ್.

 

See also  ಸಿಎಂ ನಿವಾಸದ ಬಳಿ ನಾಪತ್ತೆಯಾಗಿದ್ದ ಮರಿಗೌಡ ಪತ್ತೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು