ಮೈಸೂರು: ಎನ್.ಆರ್. ಸಮೂಹದ ಸೈಕಲ್ ಪ್ಯೂರ್ ಅಗರಬತ್ತೀಸ್ ನ ಮಾಲೀಕತ್ವದ ಮೈಸೂರು ವಾರಿಯರ್ಸ್, ಪ್ರೇರೇಪಣಾ ಯೋಜನೆಯಡಿ ನಗರದ ಮಹಾಜನಾ ಮೈದಾನದಲ್ಲಿ 7 ಕೊಳೆಗೇರಿಗಳ 8 ತಂಡಗಳೊಂದಿಗಿನ ಸೌಹಾರ್ದ ಕ್ರಿಕೆಟ್ ಆಡಿ ಗಮನಸೆಳೆಯಿತು.
ಎನ್ಆರ್ ಸಮೂಹದ ಪರೋಪಕಾರಿ ಅಂಗವಾದ ಎನ್ಆರ್ ಫೌಂಡೇಶನ್ ತನ್ನ ಪ್ರೇರೇಪಣಾ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದಯೂತ್ ಮೂವ್ ಮೆಂಟ್ ಸಂಘಟನೆಯು ಸಹಯೋಗ ನೀಡಿದ್ದು ವಿಶೇಷವಾಗಿತ್ತು.
ಪಂದ್ಯಾವಳಿಯಲ್ಲಿ ಮೈಸೂರು ವಾರುಯರ್ಸ್ ತಂಡವು ಏಕಲವ್ಯಾ ನಗರ, ಭಾರತ್ ನಗರ, ಕಲ್ಯಾಣಗಿರಿ-ಕೆ.ಹೆಚ್.ಬಿ ಕಾಲೊನಿ, ವಂದೇ ಮಾತರಂ, ಶಿವರಾತ್ರೇಶ್ವರನಗರ, ಕೇಸರೆ-ಕುರಿಮಂದಿ, ಅಂಬೇಡಕರ್ಜ್ಞಾನ ಲೋಕಾ ಮತ್ತು ಎಸ್ವೈವಿಎಂ ತಂಡಗಳೊಂದಿಗೆ ಆರು ಓವರ್ಗಳ ಟೆನ್ನಿಸ್ ಬಾಲ್ ಕಿಕೆಟ್ ಆಡಿ ಗಮನಸೆಳೆದವು.