ಮೈಸೂರು- ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಚಿಕ್ಕಮಾರ್ಕೆಟ್ ನ ಎರಡು ತರಕಾರಿ ಮತ್ತು ಹಣ್ಣಿನ ಅಂಗಡಿಗಳಿಗೆ ಇಂದು ಬೆಳಿಗ್ಗೆ ಬೆಂಕಿ ಬಿದಿದ್ದು ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ದಾವಿಸಿ ಬೆಂಕಿಯನ್ನ ನಂದಿಸಿದ್ದಾರೆ.
ನಗರದ ಅಗ್ರಹಾರ ವೃತ್ತದಲ್ಲಿನ ಚಿಕ್ಕ ಮಾರ್ಕೆಟ್ ನಲ್ಲಿ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ 2 ಅಂಗಡಿಗಳಿಗೆ ಬೆಂಕಿ ಬಿದಿದ್ದು, ಲಕ್ಷಂತಾರ ಮೌಲ್ಯದ ತರಕಾರಿ,ಹಣ್ಣು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೆಳಕಿ ಬಿದ್ದು ನಷ್ಟ ಉಂಟಾಗಿದೆ.
ತಕ್ಷಣ ಸ್ಥಳಕ್ಕೆಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂದ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.