News Kannada
Monday, September 26 2022

ಮೈಸೂರು

ದಸರಾ ಆನೆಗಳಿಗೆ ಸಿಡಿಮದ್ದು ತಾಲೀಮು - 1 min read

Photo Credit :

ದಸರಾ ಆನೆಗಳಿಗೆ ಸಿಡಿಮದ್ದು ತಾಲೀಮು

ಮೈಸೂರು- ಜಂಬೂ ಸವಾರಿಯ ದಿನ ಸಿಡಿಮದ್ದಿನ ಶಬ್ಧಕ್ಕೆ ಬೆದರದಿರಲಿ ಎಂದು ದಸರಾ ಆನೆಗಳಿಗೆ ಇಂದು ಎರಡನೇ ಬಾರಿಗೆ ಸಿಡಿಮದ್ದು ತಾಲೀಮು ಮಾಡಲಾಯಿತು.

ಇಂದು ಅರಮನೆಯ ವರಹ ಗೇಟ್ ನ ಪಾರ್ಕಿಂಗ್ ಸ್ಥಳದಲ್ಲಿ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 15 ಆನೆಗಳು, 24 ಅಶ್ವಗಳಿಗೆ ಸಿಡಿಮದ್ದು ತಾಲೀಮು ಮಾಡಲಾಯಿತು. ಜಂಬೂ ಸವಾರಿಯ ದಿನ ಮೂರು ಸುತ್ತು ಸಿಡಿಸುವ ಕುಶಲಾತೋಪುಗಳೀಗೆ ಆನೆಗಳು ಬೆದರದಿರಲಿ ಹಾಗೂ ಜನಜಂಗೂಳಿಯ ನಡುವೆ ಬೆದರದಿರಲಿ ಎಂದು ಪ್ರತಿ ದಸರಾದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಅದರಂತೆ ಇಂದು ಗಜ ಪಡೆಯ ಕ್ಯಾಪ್ಟನ್ ಅರ್ಜುನ ಸೇರಿದಂತೆ 15 ಆನೆಗಳ ಮುಂದೆ 12 ಸುತ್ತು ಸಿಡಿಮದ್ದು ಸಿಡಿಸುವ ಮೂಲಕ ಸಿಡಿಮದ್ದು ತಾಲೀಮು ಮಾಡಲಾಯಿತು.

ಗಾಬರಿಯಾದ ಕೆಲವು ಆನೆಗಳು: ಸಿಡಿಮದ್ದು ತಾಲೀಮು ಸಂದರ್ಭದಲ್ಲಿ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿದ ದ್ರೋಣ ಹೆಚ್ಚಾಗಿ ಗಾಬರಿಗೊಂಡಿದ್ದು, ಗೋಪಾಲಸ್ವಾಮಿ, ವಿಜಯ, ಪ್ರಶಾಂತ ಆನೆಗಳು ಸ್ವಲ್ಪ ಗಾಬರಿಗೊಂಡಿದವು. ಸಿಡಿಮದ್ದಿನ ಶಬ್ಧಕ್ಕೆ ಕುದುರೆಗಳು ಬೆಚ್ಚಿದ್ದು ಪಕ್ಕದಲ್ಲೇ ಇದ್ದ ಡಿಸಿಪಿ ವಿಷ್ಣುವರ್ಧನ ಇನ್ನೋವಾ ಕಾರಿಗೆ ತಾಲೀಮನಿಂದ ಕುದುರೆಯೊಂದು ಡೋರ್ ಗುದಿದ್ದು ಡಿಸಿಪಿ ವಾಹನದ ಮುಂದಿನ ಡೋರ್ ಜಖಂಗೊಂಡಿದೆ.

ಇದೇ ಸಂಧರ್ಭದಲ್ಲಿ ಮಾತನಾಡಿದ ಡಿಸಿಎಫ್ ಏಡುಕುಂಡಲ, ಇಂದಿನ ತಾಲೀಮಿನಲ್ಲಿ ಎಲ್ಲಾ ಆನೆಗಳು ಯಾವುದೇ ಹೆದರಿಕೆ ಇಲ್ಲದೆ ತಾಲೀಮು ನಡೆಸಿವೆ. ದ್ರೋಣ ಆನೆ ಸ್ವಲ್ಪ ಗಾಬರಿಗೊಂಡಿದ್ದು, ಈ ಆನೆ ದಸರಾದಲ್ಲಿ ಭಾಗವಹಿಸಲು ಮೊದಲ ಬಾರಿ ಬಂದಿದೆ. ದಸರಾ ಜಂಬೂ ಸವಾರಿಗೆ 20 ದಿನಗಳ ಬಾಕಿ ಉಳಿದಿದ್ದು, ಇದೇ ರೀತಿ ಎರಡರಿಂದ ಮೂರು ಬಾರಿ ಸಿಡಿಮದ್ದು ತಾಲೀಮು ನೀಡಿ ಆನೆಗಳನ್ನ ದಸರಾ ಜಂಬೂ ಸವಾರಿಗೆ ಸಿದ್ದಗೊಳಿಸಲಾಗುವುದು. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದರು.

See also  ನಕಲಿ ರೂಬಿ ಕಲ್ಲುಗಳ ಮಾರಟ: ಮೂವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು