News Kannada
Thursday, September 29 2022

ಮೈಸೂರು

ಮೈಸೂರು ದಸರಾ: ಒಂದು ಗಂಟೆ ಹೆಚ್ಚುವರಿಯಾಗಿ ದೀಪಾಲಂಕಾರ ಬೆಳಗಿಸಲು ನಿರ್ಧಾರ - 1 min read

Photo Credit :

ಮೈಸೂರು ದಸರಾ: ಒಂದು ಗಂಟೆ ಹೆಚ್ಚುವರಿಯಾಗಿ ದೀಪಾಲಂಕಾರ ಬೆಳಗಿಸಲು ನಿರ್ಧಾರ

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವ ಹಿನ್ನಲ್ಲೆಯಲ್ಲಿ ಅರಮನೆಯ ವಿದ್ಯುತ್ ದೀಪಾಲಂಕಾರವನ್ನ ದಸರಾ ಸಂಧರ್ಭದಲ್ಲಿ ಒಂದು ಗಂಟೆ ಕಾಲ ಹೆಚ್ಚಾಗಿ ಬೆಳಗಿಸಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಯಾದ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ದಸರೆಯ ಸಂಧರ್ಭದಲ್ಲಿ ಅರಮನೆಯ ದೀಪಾಲಂಕರವು ಸಾಮಾನ್ಯವಾಗಿ ಸಂಜೆ 7 ರಿಂದ 9 ಗಂಟೆವರೆಗೆ ಇರುತ್ತಿತ್ತು. ಆದರೆ ಈ ಬಾರಿ ಸಂಜೆ 7 ರಿಂದ 10 ಗಂಟೆವರೆಗೂ ಅರಮನೆ ದೀಪಾಲಂಕಾರಕ್ಕೆ ತೀರ್ಮಾನಿಸಲಾಗಿದೆ. ನಾಡ ಹಬ್ಬದಸರಾ ಸಂಧರ್ಭದಲ್ಲಿ ಅರಮನೆಯ ಆವರಣದಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವೀಕ್ಷಣೆ ಮಾಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆಗೆ ಆಗಮಿಸುತ್ತಾರೆ.

ಈ ವೇಳೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ರಾತ್ರಿ 9 ಗಂಟೆಗೆ ದೀಪಾಲಂಕಾರವನ್ನ ತೆಗೆಯಲಾಗುತ್ತಿತ್ತು. ದೀಪಾಲಂಕಾರ ತೆಗೆದ ತಕ್ಷಣ ಹೆಚ್ಚಿನ ಪ್ರೇಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆಯೇ ಎದ್ದು ಹೋಗುತ್ತಿದ್ದರು. ಇದನ್ನು ಗಮನಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುವುದು ರಾತ್ರಿ 10 ಗಂಟೆವರೆಗೂ ಅರಮನೆ ದೀಪಲಂಕಾರಕ್ಕೆ ನಿರ್ಧರಿಸಲಾಗಿದೆ. ಜೊತೆಗೆ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿಯೂ ರಾತ್ರಿ 10 ಗಂಟೆವರೆಗೆ ದೀಪಾಲಂಕರ ವ್ಯವಸ್ಥೆ ಇರುವ ಬಗ್ಗೆ ಸೆಸ್ಕಾಂ ಜತೆ ಚರ್ಚೆ ನಡೆಯುತ್ತಿದೆ ಎಂದು ಅರಮನೆ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಯಾದ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ರಾತ್ರಿ ವೇಳೆಯಲ್ಲೂ ಸ್ವಚ್ಚತೆ: ನಾಡ ಹಬ್ಬ ದಸರಾ ಹಬ್ಬಗೆ ದಿನಗಣನೆ ಆರಂಭವಾಗಿದ್ದು, ಸ್ವಚ್ಚತೆಯ ಬಗ್ಗೆ ಆದ್ಯತೆ ನೀಡಿರುವ ಮಹಾನಗರ ಪಾಲಿಕೆಯೂ ಸೆಪ್ಟಂಬರ್ 17ರಿಂದ ಪಾಲಿಕೆಯ ಒಂದು ವಾರ್ಡ್ ನಲ್ಲಿ ಐವರು ಪೌರ ಕಾರ್ಮಿಕರಂತೆ 65 ವಾರ್ಡ್ ಗಳಲ್ಲಿ ಸುಮಾರು 350 ಪೌರ ಕಾರ್ಮಿಕರು ದಸರೆಯ ವೇಳೆ ಪ್ರತಿದಿನ ರಾತ್ರಿ ನಗರದ ಸ್ವಚ್ಚತಾ ಕಾರ್ಯದಲ್ಲಿ ತೊಡಗುವರು ಎಂದು ಪಾಲಿಕೆಯ ಆಯುಕ್ತ ಜಿ.ಜಗದೀಶ್ ತಿಳಿಸಿದರು.

 

See also  ಜೈಲಿಗೇ ಬೇಕಾದರೆ ಹೋಗೋಣ, ತಮಿಳುನಾಡಿಗೆ ಮಾತ್ರ ನೀರು ಬಿಡಬೇಡಿ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು