ಮೈಸೂರು, ಸೆ21- ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಿ ಹಿಂತಿರುವಾಗ ಸಚಿವ ಮಹದೇವಪ್ಪ ಹಾಗಾ ಶಾಸಕ ಎಂ.ಕೆ ಸೋಮಶೇಖರ್ ಕಾರ್ ನಡುವೆ ರಸ್ತೆ ಅಫಘಾತ ಸಂಭವಿಸಿದ್ದು, ಮೂರು ಕಾರುಗಳು ಜಖಂಗೊಂಡಿದ್ದು ಸಚಿವರು ಪ್ರಾಣಾಪಾಯ ಪಾರಾಗಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ನೇರವಾಗಿ ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಲು ಸಿಎಂ ಜೊತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಸೇರಿದಂತೆ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಹೆಚ್.ಡಿ ಕೋಟೆ ಬಳಿಯ ಕಬಿನಿ ಜಲಾಶಾಯಕ್ಕೆ ತೆರಳಿದರು.
ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಿ ಹಿಂತಿರುಗುವಾಗ ಹೆಚ್.ಡಿ.ಕೋಟೆ ತಾಲೂಕಿನ ಸಿರಮಳ್ಳಿ ಬಳಿ ಸಚಿವ ಮಹದೇವಪ್ಪ ಹಾಗೂ ಶಾಸಕ ಸೋಮಶೇಖರ್ ಕಾರ್ ನಡುವೆ ಢಿಕ್ಕಿಯಾಗಿದ್ದು, ಸಚಿವರು ಮತ್ತು ಶಾಸಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಹಳ್ಳ ಕೊಳ್ಳಗಳು ಹೆಚ್ಚಾದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.