News Kannada
Friday, September 30 2022

ಮೈಸೂರು

ದಸರಾ ಕುಸ್ತಿಯಲ್ಲಿ ಗೆಲುವಿನ ನಗೆ ಬೀರಿದ ಫೈಲ್ವಾನ್ ಗಳು! - 1 min read

Photo Credit :

ದಸರಾ ಕುಸ್ತಿಯಲ್ಲಿ ಗೆಲುವಿನ ನಗೆ ಬೀರಿದ ಫೈಲ್ವಾನ್ ಗಳು!

ಮೈಸೂರು: ದಸರಾ ಅಂಗವಾಗಿ ನಡೆದ ದಸರಾ ನಾಡಕುಸ್ತಿ ಸಮಾಪ್ತಿಗೊಂಡಿದ್ದು, ಮುಧೋಳ್ನ ಸತೀಶ್ ಪಡತರೆ ದಸರಾ ಕೇಸರಿ, ದಾವಣಗೆರೆಯ ಶ್ರೀನಿವಾಸ್ ಅವರು ದಸರಾ ಕಿಶೋರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿ ನಡೆದಿದ್ದು ಎಲ್ಲ ಫೈಲ್ವಾನ್ ಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದರೂ ಕೊನೆಗೂ ತಮ್ಮ ಎದುರಾಳಿಗಳನ್ನು ಮಣಿಸಿದ ಮುಧೋಳ್ನ ಸತೀಶ್, ದಾವಣಗೆರೆಯ ಶ್ರೀನಿವಾಸ್ ಗೆಲುವಿನ ನಗೆ ಬೀರಿದರು.

86 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸತೀಶ್ ಪಡತರೆ ತಮ್ಮ ಸಹೋದರನ ವಿರುದ್ಧವೇ ಸೆಣಸಿ ಗೆಲುವನ್ನು ತಮ್ಮದಾಗಿಸಿಕೊಂಡರು. ಸಹೋದರ ಧಾರವಾಡದ ಎಸ್ಟಿಸಿಯ ಸುನೀಲ್ ಪಡತರೆ ವಿರುದ್ಧ ರೋಚಕ ಪಂದ್ಯದಲ್ಲಿ ಸೆಣಸಾಡಿ ದಸರಾ ಕೇಸರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 70 ಕೆ.ಜಿ ವಿಭಾಗದ ಪಂದ್ಯದಲ್ಲಿ ದಾವಣಗೆರೆಯ ಶ್ರೀನಿವಾಸ್ ಬೆಳಗಾವಿಯ ವಿನೋದ್ ಬಡಕುಂಡ್ರಿ ವಿರುದ್ಧ ಗೆಲುವು ಸಾಧಿಸಿ ದಸರಾ ಕಿಶೋರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ದಾವಣಗೆರೆ ಕ್ರೀಡಾನಿಲಯದ ಕಾರ್ತಿಕ್ ಕಾಟೆ ಬಾಗಲಕೋಟೆಯ ಶಿವಪ್ರಸಾದ್ ವಿರುದ್ಧ ಸೆಣಸಾಡಿ ದಸರಾ ಕಂಠೀರವ ಪ್ರಶಸ್ತಿಗೆ ಭಾಜನರಾದರು. ಇನ್ನು 57 ಕೆ.ಜಿ. ವಿಭಾಗದಲ್ಲಿ ಕೆಂಚಪ್ಪ ಪ್ರಥಮ, ಪ್ರವೀಣ್ ದ್ವಿತೀಯ, ಗಂಗಾಧರ್ ಮತ್ತು ರೂಪೇಶ್ ತೃತೀಯ ಸ್ಥಾನವನ್ನು ಪಡೆದರೆ ಇನ್ನು 61 ಕೆ.ಜಿ.ವಿಭಾಗದಲ್ಲಿ ಪ್ರಭಾಕರ್ ಪಾಲ್ಕೆ ಪ್ರಥಮ, ವಿಷ್ಣು ಪಾಲ್ಕೆ ದ್ವಿತೀಯ, ಸಚಿನ್, ಡಿ.ವೆಂಕಟೇಶ್ ತೃತೀಯ ಬಹುಮಾನ ಪಡೆದರು. 65 ಕೆ.ಜಿ.ವಿಭಾಗದಲ್ಲಿ ರವಿ ಕೆಂಪಣ್ಣನವರ್ ಪ್ರಥಮ, ಸದಾಶಿವು ದ್ವಿತೀಯ, ಆಕಾಶ್, ಮಹೇಶ್ ತೃತೀಯ ಬಹುಮಾನ ಗಿಟ್ಟಿಸಿದರು.

ಕಿರಿಯರ 39 ಕೆ.ಜಿ ವಿಭಾಗದಲ್ಲಿ ರೋಹನ್ ಎಂ.ದೊಡ್ಡಮನಿ ಪ್ರಥಮ, ಕಾರ್ತಿಕ್ ದ್ವಿತೀಯ, ಬರ್ಮಪ್ಪ, ಮೊಹಮ್ಮದ್ ಜೈದ್ ತೃತೀಯ, 42 ಕೆ.ಜಿ.ವಿಭಾಗದಲ್ಲಿ ಮಲ್ಲೇಶ್ ಪ್ರಥಮ, ರೋಹನ್ ದ್ವಿತೀಯ, ಉದಯ್, ಲೋಹಿತ್ ತೃತೀಯ, 46 ಕೆ.ಜಿ.ವಿಭಾಗದಲ್ಲಿ ಮಾರುತಿ ಪ್ರಥಮ, ಕೃಷ್ಣ ದ್ವಿತೀಯ, ಸಚಿನ್, ಸಂಜಯ್ ಪುಜಾರಿ ತೃತೀಯ ಹಾಗೂ 50 ಕೆ.ಜಿ ವಿಭಾಗದಲ್ಲಿ ಸುನೀಲ್ ಪ್ರಥಮ, ಮಹೇಶ್ ಕುಮಾರ್ ದ್ವಿತೀಯ, ಮಹಾಲಿಂಗರಾಯ, ಕುಮಾರ ತೃತೀಯ ಸ್ಥಾನ ಪಡೆದುಕೊಂಡರು. ಮಳೆಯ ನಡುವೆಯೂ ಕುಸ್ತಿ ಪಂದ್ಯವನ್ನು ನೋಡಲು ಜನ ಆಗಮಿಸಿದ್ದು ವಿಶೇಷವಾಗಿತ್ತು.

See also  ಪೋಲೀಸ್‌ ಅಧಿಕಾರಿಯ ಲವ್‌ ಸೆಕ್ಸ್‌ ದೋಖಾ ಬಯಲಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು