News Kannada
Monday, September 26 2022

ಮೈಸೂರು

ಮೈಸೂರು ಅರಮನೆಯಲ್ಲಿ ಇಂದು ಮಹಾರಾಣಿ ತ್ರಿಷಿಕಾ ಸೀಮಂತ - 1 min read

Photo Credit :

ಮೈಸೂರು ಅರಮನೆಯಲ್ಲಿ ಇಂದು ಮಹಾರಾಣಿ ತ್ರಿಷಿಕಾ ಸೀಮಂತ

ಮೈಸೂರು: ಇಂದು ಮೈಸೂರು ಅರಮನೆ ಆವರಣದಲ್ಲಿ ಮತ್ತೊಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ವಿಜಯದಶಮಿಯ ನಂತರ ಮತ್ತೆ ಯದುವಂಶದಲ್ಲಿ ಸಂತಸ ಕ್ಷಣಗಳು ಆರಂಭಿಸಿದೆ. ಅದಕ್ಕೆ ಕಾರಣ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿ ಆಗಿರುವುದು.

ಇಂದು ಅರಮನೆಯಲ್ಲಿ ತ್ರಿಷಿಕಾ ಅವರಿಗೆ ಸೀಮಂತ ಕಾರ್ಯ ನಡೆಯಲಿದೆ. ಅರಮನೆಯಲ್ಲಿ ಇದಿಗ ಸಕಲ ಸಿದ್ಧತೆಗಳು ನಡೆಯುತ್ತಿವೆ. ತ್ರಿಷಿಕಾ ಅವರ ತಂದೆ, ತಾಯಿ, ಸಹೋದರ, ಸಹೋದರಿ ಈಗಾಗಲೇ ಅರಮನೆಗೆ ಆಗಮಿಸಿದ್ದು, ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.

ಈ ಕಾರ್ಯಕ್ಕೆ ರಾಜ ವಂಶಸ್ಥರಿಗೆ ಆಹ್ವಾನ ನೀಡಲಾಗಿದ್ದು ಅವರೆಲ್ಲಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ದಸರಾದ ಖಾಸಗಿ ದರ್ಬಾರ್ನಲ್ಲಿ ಭಾಗವಹಿಸಲು ತ್ರಿಷಿಕಾ ಅವರು ತವರು ಮನೆಯಿಂದ ಪತಿಯ ಮನೆಗೆ ಆಗಮಿಸಿದ್ದರು. ನಂತರ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತೆ ಪದೇ ಪದೇ ಓಡಾಟ ನಡೆಸುವುದು ಬೇಡ ಎಂಬ ಕಾರಣಕ್ಕೆ ಇವತ್ತೆ ಸೀಮಂತ ಕಾರ್ಯ ನಡೆಸಿ ಅವರನ್ನು ತವರು ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಎಲ್ಲಾ ಜನರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.

See also  ಮೈಸೂರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಯತ್ನ: ಕಾರ್ಯಕರ್ತರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು