News Kannada
Thursday, September 29 2022

ಮೈಸೂರು

ಸಾಹಿತ್ಯ ಸಮ್ಮೇಳನಕ್ಕೆ ಚಂಪಾ ಆಯ್ಕೆ ವಿರೋಧಿಸಿ ಪ್ರತಿಭಟನೆ - 1 min read

Photo Credit :

ಸಾಹಿತ್ಯ ಸಮ್ಮೇಳನಕ್ಕೆ ಚಂಪಾ ಆಯ್ಕೆ ವಿರೋಧಿಸಿ ಪ್ರತಿಭಟನೆ

ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಂಪಾರನ್ನು ಅಧ್ಯಕ್ಷರಾಗಿ ಮಾಡಿರುವುದನ್ನು ಹಿಂಪಡೆದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಉದ್ಘಾಟಕರಾಗಿದ್ದ ನಿಸಾರ್ ಅಹಮದ್ ಅವರಂತಹ ಅತ್ಯುತ್ತಮ ಜಾತ್ಯಾತೀತ ಸಾಹಿತಿಗಳನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಉಪಾಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ದೇಶದಲ್ಲಿ ಅಸಹಿಷ್ಣುತೆಗೆ ಬ್ರಾಹ್ಮಣರೇ ಕಾರಣರು. ಬ್ರಾಹ್ಮಣರು ಭಾರತದ ಮೂಲನಿವಾಸಿಗಳಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಚಂಪಾ ವಿದ್ಯಾವಂತರೇ ಎಂಬುದು ಪ್ರಶ್ನೆಯಾಗಿದೆ,
ಚಂಪಾ ಮಾತನಾಡುವ ವೇಳೆ ನೈತಿಕ ಪೊಲೀಸ್ ಗಿರಿ ಮತ್ತು ಆಕ್ರಮಣಗಳಿಗೆ ಮೂಲಭೂತ ಕಾರಣಕರ್ತರು ಬ್ರಾಹ್ಮಣರು, ಪುರೋಹಿತಶಾಹಿಗಳು, ಕಮಿಷನ್ ಏಜೆಂಟ್ ಗಳು ಎನ್ನುವ ಮೂಲಕ ಹಿಂದೂ ಸನಾತನ ಧರ್ಮಕ್ಕೆ ನೋವುಂಟಾಗಿದ್ದು, ಚಂಪಾ ಹೇಳಿಕೆಗಳು ಸಮಾಜಕ್ಕೆ ಯಾವ ಸಂದೇಶ ನೀಡುತ್ತದೆ ಎಂಬುದು ಸರ್ಕಾರ ಮತ್ತು ಗುಪ್ತಚರ ಇಲಾಖೆ ಅರಿಯಬೇಕು. ಮುಂದಿನ ದಿನಗಳಲ್ಲಿ ಶಾಂತಿಯುತ ಪಾರಂಪರಿಕ ಮೈಸೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಂಪಾ ಬಂದರೆ ಕೋಮುಗಲಭೆಗೆ ಕಾರಣರಾಗುತ್ತಾರೆ. ರಾಜ್ಯಸರ್ಕಾರ ಇವೆಲ್ಲವನ್ನು ಪರಿಗಣಿಸಿ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು. ಇಲ್ಲವಾದಲ್ಲಿ ರಾಜಾಳ್ವಿಕೆಯ ಆಸ್ಥಾನದ ಮಾದರಿಯಲ್ಲೇ ದೇಶದ ಉನ್ನತ ಶ್ರೇಣಿಯ ಪಂಡಿತರನ್ನು ವಿಧ್ವಾಂಸರನ್ನು ಕರೆಯಿಸಿ ಬ್ರಾಹ್ಮಣ ಸಮುದಾಯದಿಂದ ಪ್ರತ್ಯೇಕ ಕನ್ನಡ ಸಮ್ಮೇಳನ ಆಯೋಜಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

See also  ತಾಯಿ ಮಗಳನ್ನ ಕೊಂದು ಬಾವಿಗೆಸದ ಪೂಜಾರಿ ಪ್ರಿಯಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು