News Kannada
Wednesday, October 05 2022

ಮೈಸೂರು

ಯೋಗದೊಂದಿಗೆ ಆರೋಗ್ಯಕರ ಆಹಾರದ ವಿಶೇಷತೆಯೇ ಚಕ್ರಹೌಸ್ - 1 min read

Photo Credit :

ಯೋಗದೊಂದಿಗೆ ಆರೋಗ್ಯಕರ ಆಹಾರದ ವಿಶೇಷತೆಯೇ ಚಕ್ರಹೌಸ್

ಮೈಸೂರು: ಮೈಸೂರು ಹತ್ತುಹಲವು ವಿಶೇಷತೆಗಳಿಂದ ದೇಶವಿದೇಶಗಳ ಜನರನ್ನು ಸೆಳೆಯುತ್ತಿದೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಯೋಗದ ಪ್ರಮುಖ ಕೇಂದ್ರವಾಗಿ ಗಮನ ಸೆಳೆಯುತ್ತಿರುವುದರಿಂದ ವಿದೇಶದ ಸಾವಿರಾರು ಜನ ಇಲ್ಲಿಗೆ ಬಂದು ಯೋಗ ಕಲಿತುಕೊಂಡು ತೆರಳುತ್ತಿದ್ದಾರೆ. ಇಂತಹವರಿಗಾಗಿ ಯೋಗದೊಂದಿಗೆ ಉತ್ತಮ ಯೋಗ್ಯ ಪೌಷ್ಠಿಕಾಂಶ ಹೊಂದಿದ ಆಹಾರ ನೀಡುವ ಮತ್ತು ಯೋಗ ಕಲಿಸುವ ಆತಿಥ್ಯದ ಮನೆಯೊಂದನ್ನು ತೆರೆಯಲಾಗಿದ್ದು, ಅದುವೇ ಚಕ್ರಹೌಸ್.

ರಾಜೇಶ್ ಬೇವು ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಚಕ್ರಹೌಸ್ ನಿಜಕ್ಕೂ ಅದ್ಭುತ ಮತ್ತು ಪರಂಪರೆಯನ್ನು ಸಾರುವ ಸುಂದರ ಕುಟೀರವೂ ಹೌದು. ಇಲ್ಲಿಗೆ ಕಾಲಿಟ್ಟಿದ್ದೇ ಆದರೆ ಸುಂದರ ಲೋಕವೊಂದು ನಮ್ಮ ಕಣ್ಣಮುಂದೆ ಬಂದು ನಿಂತು ಬಿಡುತ್ತದೆ.

ನಗರದ ಗೋಕುಲಂ(#829, ಮೊದಲನೇ ಮುಖ್ಯರಸ್ತೆ, 3ನೇ ಹಂತ)ನಲ್ಲಿರುವ ಆತಿಥ್ಯದ ಮನೆ ಚಕ್ರ ಹೌಸ್ ಹಲವು ವಿಶೇಷತೆ ಹೊಂದಿದ್ದು, ಇದು ಯೋಗದ ಮುದ್ರೆಯೊಂದರ ಹೆಸರಿನಂತಿದ್ದು, ಇಲ್ಲಿಗೆ ಆಗಮಿಸುವ ಗ್ರಾಹಕರಿಗೆ ವಾಸ್ತವ್ಯಕ್ಕೂ ಅವಕಾಶವಿದ್ದು, ಯೋಗದೊಂದಿಗೆ ಅದಕ್ಕೆ ತಕ್ಕಂತೆ ಆರೋಗ್ಯ ಕಾಪಾಡುವ ವಿವಿಧ ಖಾದ್ಯಗಳನ್ನು ಇಲ್ಲಿ ನೀಡಲಾಗುತ್ತದೆ.

ಸದಾ ಒತ್ತಡದಿಂದ ಬದುಕು ಸಾಗಿಸುವವರು ಈಗ ನೆಮ್ಮದಿಯ ಜೀವನಕ್ಕಾಗಿ ಯೋಗದ ಮೊರೆ ಹೋಗುತ್ತಾರೆ. ಇಂತಹವರಿಗಾಗಿಯೇ ಈ ಚಕ್ರಹೌಸ್ ಹೇಳಿ ಮಾಡಿಸಿದ ಆತಿಥ್ಯ ಮನೆಯಾಗಿದೆ. ಇಲ್ಲಿ ಎಲ್ಲ ರೀತಿಯ ಯೋಗ ಪಾಠಗಳನ್ನು ಹೇಳಿ ಕೊಡಲಾಗುತ್ತದೆ. ಆರೋಗ್ಯಪೂರ್ಣ ತರಕಾರಿ, ಕಾಳು ಕಡ್ಡಿಗಳು, ಸೊಪ್ಪುಗಳು ಹೀಗೆ ಸಸ್ಯಾಹಾರಕ್ಕೆ ಸಂಬಂಧಿಸಿದ ತರಾವರಿ ಖಾದ್ಯಗಳನ್ನು ಇಲ್ಲಿ ತಯಾರಿಸಿ ನೀಡಲಾಗುತ್ತದೆ.

ಮುಂಜಾನೆ ಚುಮುಚುಮು ಬೆಳಕಿನಲ್ಲಿಯೇ ಯೋಗ ತರಗತಿಗಳು ಆರಂಭವಾಗುತ್ತವೆ. ಅದಾದ ನಂತರ ಒಂದೊಂದು ದಿನವೂ ಒಂದೊಂದು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇಲ್ಲಿ ಬಳಕೆ ಮಾಡುವ ತರಕಾರಿಗಳನ್ನು ಅವುಗಳ ಔಷಧೀಯ ಗುಣಗಳಿಗೆ ಸಂಬಂಧಪಟ್ಟಂತೆ ಉಪಯೋಗಿಸಲಾಗುತ್ತದೆ. ಸ್ಥೂಲಕಾಯ ಹೊಂದಿದವವರಿಗೆ ಯೋಗದೊಂದಿಗೆ ಆಹಾರ ಪಥ್ಯವನ್ನು ನೀಡುವುದರಿಂದ ಅವರು ತೆಳ್ಳಗಾಗಲು ಸಾಧ್ಯವಿದೆ.

ಈಗಾಗಲೇ ರಾಜ್ಯ, ದೇಶವಿದೇಶಗಳಿಂದ ಇಲ್ಲಿಗೆ ಆಗಮಿಸಿದ ಹಲವರು ಯೋಗ ಕಲಿತು, ಆರೋಗ್ಯವನ್ನು ಕಾಪಾಡಿಕೊಂಡು ಹೋಗಿರುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿಯೇ ಇಲ್ಲಿಗೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ನಾವು ಕಾಣಬಹುದಾಗಿದೆ.

ಒಟ್ಟಾರೆ ಹೇಳಬೇಕೆಂದರೆ ಮೈಸೂರಿನಲ್ಲಿ ಅತಿಥಿಗಳನ್ನು ಉಪಚಾರ ಮಾಡುವ ನೂರಾರು ಆತಿಥ್ಯದ ಮನೆಗಳು ಇರಬಹುದಾದರೂ ಚಕ್ರಹೌಸ್ ನಂತೆ ಯೋಗದೊಂದಿಗೆ ಆರೋಗ್ಯ ಕಾಪಾಡುವ ಆತಿಥ್ಯದ ಮನೆ ಚಕ್ರಹೌಸ್ ಹೊರತುಪಡಿಸಿದರೆ ಬೇರೆ ಯಾವುದೂ ಇಲ್ಲ ಎಂದರೆ ಅತಿಶಯೋಕ್ತಿಯಾಗದು.

See also  17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶದಲ್ಲಿ ಮಕ್ಕಳಿಂದ ವೈವಿಧ್ಯಮಯ ಶಕ್ತಿ, ಸಾಹಸಗಳ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು