News Kannada
Tuesday, October 04 2022

ಮೈಸೂರು

ಪರೀಕ್ಷೆ ಸರಿಯಾಗಿ ಬರೆಯದ ವಿದ್ಯಾರ್ಥಿ ಆತ್ಮಹತ್ಯೆ - 1 min read

Photo Credit :

ಪರೀಕ್ಷೆ ಸರಿಯಾಗಿ ಬರೆಯದ ವಿದ್ಯಾರ್ಥಿ ಆತ್ಮಹತ್ಯೆ

ಮೈಸೂರು: ಪರೀಕ್ಷೆ ಸರಿಯಾಗಿ ಬರೆಯಲಿಲ್ಲ ಎಂದು ಮನನೊಂದು ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಗರದ ಸಿದ್ಧಿಖಿ ನಗರದಲ್ಲಿ ನಡೆದಿದೆ.

ಹೀಗೆ ನೇಣಿಗೆ ಶರಣಾದ ವಿದ್ಯಾರ್ಥಿ ಪವನ್ ಕುಮಾರ್(19). ಈತ ಜೆಎಸ್ಎಸ್ ಫಾರ್ಮಾಸಿಸ್ಟ್ ಕಾಲೇಜಿನಲ್ಲಿ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದು, ಸೆಮಿಸ್ಟರ್ ಪರೀಕ್ಷೆ ಸರಿಯಾಗಿ ಬರೆಯಲಿಲ್ಲ ಎಂದು ಸಿದ್ಧಿಖಿ ನಗರದಲ್ಲಿ ವಾಸವಿದ್ದ ಬಾಡಿಗೆ ರೂಂಗೆ ಬಂದು ನನಗೆ ಓದಲು ಇಷ್ಟವಿಲ್ಲ. ಮನೆಯವರ ಬಲವಂತಕ್ಕೆ ಓದಲು ಬಂದಿದ್ದೇನೆ. ನಿನ್ನೆ ನಡೆದ ಪರೀಕ್ಷೆಯಲ್ಲಿ ಸರಿಯಾಗಿ ಬರೆಯಲಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ರಾತ್ರಿ ಡೆತ್ ನೋಟ್ ಬರೆದಿಟ್ಟು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ವಿದ್ಯಾರ್ಥಿ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನ ಹಳ್ಳಿ ಗ್ರಾಮದವನು. ಈ ಸಂಬಂಧ ಎನ್. ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವ ಹಸ್ತಾಂತರಿಸಿದ್ದಾರೆ.

See also  ಭಗವತ್ ಸಿಂಗ್ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು