News Kannada
Tuesday, October 04 2022

ಮೈಸೂರು

ಮಾಂಬಳ್ಳಿ ಜನಕ್ಕೆ ಮಳೆಬಂದರೆ ನೆಮ್ಮದಿ ಕೆಡುತ್ತದೆ! - 1 min read

Photo Credit :

ಮಾಂಬಳ್ಳಿ ಜನಕ್ಕೆ ಮಳೆಬಂದರೆ ನೆಮ್ಮದಿ ಕೆಡುತ್ತದೆ!

ಚಾಮರಾಜನಗರ: ಯಳಂದೂರು ತಾಲೂಕಿನಲ್ಲಿರುವ ಮಂಗಲ ಗ್ರಾಮದ ಜನ ಮಳೆಬಂದರೆ ಬೆಚ್ಚಿ ಬೀಳುತ್ತಾರೆ. ಕಾರಣ ಮಳೆಗೆ ರಸ್ತೆಗಳು ಕೆಸರುಮಯವಾದರೆ, ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಸೇರಿ ಬಿಡುತ್ತದೆ. ಅಷ್ಟೇ ಅಲ್ಲ ತಗ್ಗುಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತದೆ.

ಇಂತಹ ಸಮಸ್ಯೆಯಲ್ಲೇ ಜನ ದಿನ ಕಳೆಯುತ್ತಾರೆ. ಅದು ಅನಿವಾರ್ಯವೂ ಹೌದು. ಸುಮಾರು ಎಂಟು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದ ಮಧ್ಯಭಾಗದಲ್ಲಿ ಕುಂಬಾರಕಟ್ಟೆ ಎಂಬ ದೊಡ್ಡ ಕಟ್ಟೆ ಇದೆ. ಇದರ ಸುತ್ತಲೂ ಅನೇಕ ಬಡಾವಣೆಗಳಿದ್ದು ಪ್ರತಿನಿತ್ಯ ಇಲ್ಲಿಗೆ ಗ್ರಾಮದ ಕೊಳಚೆ ನೀರು ಹರಿದು ಬಂದು ಶೇಖರಣೆಗೊಳ್ಳುತ್ತದೆ. ಈ ನೀರನ್ನು ಹೊರ ಹಾಕಲು ಗ್ರಾಮ ಪಂಚಾಯಿತಿ ವತಿಯಿಂದ ಮೋಟಾರ್ ಅಳವಡಿಸಿದ್ದರೂ ಇದರ ಸಮರ್ಪಕ ನಿರ್ವಹಣೆಯಾಗದ ಕಾರಣ ನೀರು ನಿಂತು ದುರ್ವಾಸನೆ ಬೀರುವುದಲ್ಲದೆ, ಸೊಳ್ಳೆಗಳ ಆವಾಸ ಸ್ಥಾನವಾಗಿಯೂ ಮಾರ್ಪಾಡುಗೊಂಡಿದೆ.

ಮಳೆ ಬಂದರೆ ಇಲ್ಲಿನ ಗೌಸಿಯಾ ಮೊಹಲ್ಲಾದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತದೆ. ಜತೆಗೆ ಹಾವು, ಕ್ರಿಮಿಕೀಟಗಳು, ಹುಳುಗಳು ಮನೆ ಹೊಕ್ಕುತ್ತವೆ.  ರಾತ್ರಿ ವೇಳೆಯಲ್ಲಂತು ಮಳೆ  ಬಂದರೆ ಇಡೀ ರಾತ್ರಿ ನಿದ್ದೆ ಮಾಡದೆ ಬೆಳಗು ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಚರಂಡಿಯೂ ಸಮರ್ಪಕವಾಗಿ ನಿರ್ಮಾಣವಾಗದೆ ಕುಡಿಯುವ ನೀರಿನ ಪೈಪ್ ಗಳು ಚರಂಡಿಯ ಒಳಗಿಂದಲೇ ಪಡೆದುಕೊಂಡಿದ್ದು, ಕೆಲವೊಮ್ಮೆ ಕಲುಷಿತ ನೀರು ಮಿಶ್ರಣವಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಈ ಬಡಾವಣೆಯಲ್ಲಿ ಕಳೆದ 4 ವರ್ಷಗಳಿಂದ ಒಂದು ಬೀದಿಗೆ ಮಾತ್ರ ರಸ್ತೆ ನಿರ್ಮಾಣ ಮಾಡಲಾಗಿದೆ. ಉಳಿದ ಬೀದಿಗಳಲ್ಲಿ ಮಂಡಿ ಮಟ್ಟದ ಹಳ್ಳಗಳು ಬಿದ್ದಿದ್ದು ಕೆಸರುಮಯ ನೀರು ಇಲ್ಲೇ ಶೇಖರಣೆಗೊಳ್ಳುತ್ತದೆ. ಇದನ್ನು ತುಳಿದುಕೊಂಡೇ ಇಲ್ಲಿನ ಮಕ್ಕಳು ಶಾಲೆಗೆ ತೆರಳಬೇಕಾಗಿದೆ.

ಮಳೆ ಬಂದಾಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿಹೋಗುವ ಜನಪ್ರತಿನಿಧಿಗಳು ಮತ್ತೆ ಈ ಕಡೆ ಬರುವುದೇ ಇಲ್ಲ.

See also  83ನೇ ನುಡಿ ಜಾತ್ರೆಗೆ ಸಾಂಸ್ಕೃತಿಕ ನಗರಿಯಲ್ಲಿ ಭರದ ಸಿದ್ದತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು