News Kannada
Tuesday, September 27 2022

ಮೈಸೂರು

ಮೈಸೂರಿನ ನಂಜುಮಳಿಗೆ ಬಳಿ ಫುಟ್ ಪಾತ್ ತೆರವು - 1 min read

Photo Credit :

ಮೈಸೂರಿನ ನಂಜುಮಳಿಗೆ ಬಳಿ ಫುಟ್ ಪಾತ್ ತೆರವು

ಮೈಸೂರು: ನಗರ ಕೃಷ್ಣರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನಂದವಾಡಿ ರಸ್ತೆಯಲ್ಲಿ ನಂಜುಮಳಿಗೆ ವೃತ್ತದಿಂದ ಶ್ರೀನಿವಾಸ ವೃತ್ತದವರೆಗೆ ರಸ್ತೆಯ ಎರಡೂ ಬದಿಯ ಫುಟ್ ಪಾತ್ ನ್ನು ಅಂಗಡಿಯವರು ಆಕ್ರಮಿಸಿಕೊಂಡು ಸಾಮಾನು ಸರಂಜಾಮುಗಳನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ನಗರಪಾಲಿಕೆ ಪೊಲೀಸರ ಸಹಕಾರದಲ್ಲಿ ತೆರವುಗೊಳಿಸಿದೆ.

ಅಂಗಡಿಯವರು, ತಳ್ಳುವ ಗಾಡಿಯವರು ಫುಟ್ ಪಾತ್ ಮೇಲೆ ಹಣ್ಣು, ಹೂವು, ತರಕಾರಿ ಮಾರಾಟ ಮಾಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣರಾಜ ಸಂಚಾರ ಪೊಲೀಸರು ಮೈಸೂರು ನಗರ ಪಾಲಿಕೆಯ ಅಭಯ ಸಿಬ್ಬಂದಿ ಸಹಕಾರದೊಂದಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಫುಟ್ ಪಾತ್ ಗಳ ಮೇಲೆ ಇಟ್ಟಿದ್ದ ಅಂಗಡಿಯವರುಗಳ ಸಾಮಾನುಗಳನ್ನು ಹಾಗೂ ತಳ್ಳುವ ಗಾಡಿಯಲ್ಲಿ ಹಣ್ಣು, ಹೂವು ಹಾಗೂ ತರಕಾರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದವರನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.

ಅಲ್ಲದೇ ಇನ್ನು ಮುಂದೆ ಫುಟ್ ಪಾತ್ ಗಳ ಮೇಲೆ ಅಂಗಡಿಯವರು ತಮ್ಮ ಸಾಮಾಗ್ರಿಗಳನ್ನು ಇಡದಂತೆ ಹಾಗೂ ತಳ್ಳುವ ಗಾಡಿಯ ವ್ಯಾಪಾರಸ್ಥರು ಫುಟ್ ಪಾತ್ ಗಳ ಮೇಲೆ ವ್ಯಾಪಾರ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುತ್ತಾರೆ.

ಮೈಸೂರು ನಗರ ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಡಿ. ಮಂಜುನಾಥ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

See also  ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ನೇಪಾಳಿ ಮಹಿಳೆ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು