News Kannada
Sunday, September 25 2022

ಮೈಸೂರು

ಕೊಂಡೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸಿದ ಜನ - 1 min read

Photo Credit :

ಕೊಂಡೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸಿದ ಜನ

ಹುಣಸೂರು: ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ಮಹದೇಶ್ವರಸ್ವಾಮಿ ಜಾತ್ರೆ ಹಾಗೂ ಹುಲಿವಾಹನೋತ್ಸವವು ಅದ್ಧೂರಿಯಾಗಿ ನಡೆಯಿತು.

ಹರಕೆ ಹೊತ್ತವರು ಹಾಲರವಿ, ಬಾಯಿಬೀಗ, ಹಾಕಿಸಿಕೊಂಡ ಮಹಿಳೆಯರ ಜೊತೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಧನ್ಯತಾ ಭಾವ ಮೆರೆದರು, ಕೊಂಡೋತ್ಸವದಲ್ಲಿ ಸುತ್ತಮುತ್ತಲಿನ ಉದ್ದೂರು, ಧರ್ಮಪುರ, ಗೌರಿಪುರ, ನಂಜಾಪುರ, ಚಲ್ಲಹಳ್ಳಿ, ಬೆಂಕಿಪುರ, ಹಳೆಪುರ, ಹೊಸಪುರ, ಮಹದೇವಪುರ, ಹಳ್ಳದಕೊಪ್ಪಲು, ಕರಿಮುದ್ದನಹಳ್ಳಿ, ತರೀಕಲ್ಲು, ಗಾಗೇನಹಳ್ಳಿ, ತಿಪ್ಪೂರು ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಭಾಗವಹಿಸಿದ್ದರು.

ನಾಡಪ್ಪನಹಳ್ಳಿ ಮಕ್ಕಳು ಮತ್ತು ಯುವಕರು ಹಬ್ಬದ ಹಿಂದಿನ ದಿನ ಅಂದರೆ ಸೋಮವಾರದಂದು ಓಕುಳಿಯಾಡಿಕೊಂಡು ದೇವಸ್ಥಾನದಿಂದ ಸ್ವಲ್ಪ ದೂರದ ಕೆರೆಯಲ್ಲಿ ಸ್ನಾನ ಮಾಡಿ, ಮಡಿಯುಟ್ಟುಕೊಂಡು ತೆಪ್ಪೋತ್ಸವದ ಬಳಿಕ ಗ್ರಾಮದಲ್ಲಿ ಭಕ್ತಾಧಿಗಳು ಹುಲಿವಾಹನ ಹಾಗೂ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊತ್ತು, ಬಾಯಿಗೆ ಬೀಗಹಾಕಿಸಿಕೊಂಡು ಮಹಿಳೆಯರ ಜೊತೆ ನಾಡಪ್ಪನ ಹಳ್ಳಿ ಹಾಗೂ ಮಹದೇವಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಪೂಜೆ ನೆರವೇರಿಸಿದರು.

ಜಾತ್ರೆಯಲ್ಲಿ ಜಾನುವಾರುಗಳಿಗೆ ರೋಗ ರುಜಿನ ಬಾರದಂತೆ ಹರಕೆ ಹೊತ್ತ ಮಂದಿ ರಾಸುಗಳೊಂದಿಗೆ ಪಂಜನ್ನು ಹಿಡಿದು ಬೆಳಗಿನ ಜಾವ ದೇವಸ್ಥಾನದ ಆವರಣದಲ್ಲಿ ನಡೆಯುವ ಕೊಂಡೋತ್ಸವದಲ್ಲಿ ಪಾಲ್ಗೊಂಡು ದೇವರ ಗುಡ್ಡಪ್ಪ ಮಹೇಂದ್ರ ಮತ್ತು ಸಣ್ಣಸ್ವಾಮಿ ಮೊದಲು ಕೊಂಡ ಹಾಯ್ದರು. ನಂತರ ಎಲ್ಲ ಗ್ರಾಮಗಳ ರೈತರು ಬಲಿಷ್ಠ ಜೋಡಿ ಎತ್ತುಗಳು, ಹಸು, ಕರುಗಳನ್ನು ಸಿಂಗಾರಗೊಳಿಸಿ ಹೊತ್ತ ಹರಕೆಯನ್ನು ನಾಡಪ್ಪನಹಳ್ಳಿ ಕೆರೆ, ಕಾಲುವೆಯಲ್ಲಿ ಸ್ನಾನ ಮಾಡಿ ಬಳಿಕ ಕೊಂಡ ಹಾಯಿಸುವ ಮೂಲಕ ಹರಕೆ ತೀರಿಸಿದರು.

See also  ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು