News Kannada
Saturday, September 24 2022

ಮೈಸೂರು

ಇಂದಿನಿಂದ ನಾಗರಹೊಳೆಯಲ್ಲಿ ಹುಲಿ ಗಣತಿ: 176 ಕ್ಯಾಮೆರಾ ಫಿಕ್ಸ್ - 1 min read

Photo Credit :

ಇಂದಿನಿಂದ ನಾಗರಹೊಳೆಯಲ್ಲಿ ಹುಲಿ ಗಣತಿ: 176 ಕ್ಯಾಮೆರಾ ಫಿಕ್ಸ್

ಮೈಸೂರು, ನ15- ಇಂದಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 45 ದಿನಗಳ ಕಾಲ ಹುಲಿ ಗಣತಿಯ ಕಾರ್ಯ ಆರಂಭವಾಗಲಿದ್ದು, ಮೊದಲ ಬಾರಿಗೆ ಅರಣ್ಯಾ ಸಿಬ್ಬಂದಿಗಳು ಮಾತ್ರ ಗಣತಿ ಕಾರ್ಯ ಮಾಡಲಿದ್ದು ಇದಕ್ಕಾಗಿ 176 ಕ್ಯಾಮೆರಾಗಳನ್ನ ವಿವಿಧ ವನ್ಯ ಜೀವಿ ವಲಯದಲ್ಲಿ ಹುಲಿ ಪತ್ತೆಗೆ ಅಳವಡಿಸಲಾಗಿದೆ.

ಜಿಲ್ಲೆಯ ಹೆಚ್.ಡಿ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ, ಮೇಟಿಕುಪ್ಪೆ ಮತ್ತು ಡಿ.ಬಿ ಕುಪ್ಪೆ ವನ್ಯ ಜೀವಿ ವಲಯಗಳಲ್ಲಿ ಹುಲಿ ಗಣತಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಅಂತರಸಂತೆ ವನ್ಯ ಜೀವಿ ವಲಯದಲ್ಲಿ 18 ಕಡೆ 38 ಕ್ಯಾಮೆರಾ, ಮೇಟಿ ಕುಪ್ಪೆ ವನ್ಯ ಜೀವಿ ವಲಯದಲ್ಲಿ 25 ಕಡೆ 50 ಮತ್ತು ಡಿ.ಬಿ ಕುಪ್ಪೆ ವನ್ಯ ಜೀವಿ ವಲಯದಲ್ಲಿ 44 ಕಡೆ 88 ಕ್ಯಾಮೆರಾಗಳನ್ನ ಹುಲಿ ಪತ್ತೆಗೆ ಹುಲಿ ಗಣತಿ ತರಬೇತಿ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾಗಳನ್ನ ಅಳವಡಿಸಿದ್ದಾರೆ.

45 ದಿನಗಳ ಕಾಲ ನಡೆಯುವ ಹುಲಿ ಗಣತಿಗೆ ಇದೇ ಮೊದಲ ಬಾರಿಗೆ ಸ್ವಯಂ ಸೇವಕರನ್ನ ಅರಣ್ಯ ಇಲಾಖೆ ಬಳಸಿಕೊಳ್ಳುತ್ತಿಲ್ಲ. ಇಲಾಖೆಯ ನೌಕರರಿಗೆ ತರಬೇತಿ ಕೊಟ್ಟಿರುವುದರಿಂದ ಸ್ವಯಂ ಸೇವಕರ ಅವಶ್ಯಕತೆ ಇಲ್ಲ. ಕಳೆದ ಹುಲಿ ಗಣತಿ ವೇಳೆ 675 ಚ.ಕಿ.ಮೀ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 72ಕ್ಕೂ ಹೆಚ್ಚು ಹುಲಿಗಳು ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದವು. ವನ್ಯ ಜೀವಿ ತಜ್ಞರ ಪ್ರಕಾರ 10 ಚ.ಕಿ.ಮೀ.ಗೆ 1 ಹುಲಿ ಇರುತ್ತದೆ. ಆದರೆ 675 ಚ.ಕಿ.ಮೀಗೆ 68 ಹುಲಿಗಳು ಇರಬೇಕು.

ಆದರೆ ಇಲ್ಲಿ 72 ಹುಲಿ ಚಿತ್ರಗಳು ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ವರ್ಷ ಹುಟ್ಟು ಮತ್ತು ಸಾಯುವ ಹುಲಿಗಳ ಸಂಖ್ಯೆಗೆ ಅನುಗುಣವಾಗಿ 4 ರಿಂದ 5 ಹುಲಿಗಳು ಹೆಚ್ಚು ಅಥವಾ ಕಡಿಮೆ ಇರಬಹುದು ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ.

 

See also  ಸೌರಶಕ್ತಿಯಿಂದ ಮನೆಬೆಳಗಿಸಿದ ಭಕ್ತವತ್ಸಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು