News Kannada
Wednesday, October 05 2022

ಮೈಸೂರು

ಈ ತಂಗುದಾಣದತ್ತ ಪ್ರಯಾಣಿಕರೇ ಸುಳಿಯಲ್ಲ! - 1 min read

Photo Credit :

ಈ ತಂಗುದಾಣದತ್ತ ಪ್ರಯಾಣಿಕರೇ ಸುಳಿಯಲ್ಲ!

ಚಾಮರಾಜನಗರ: ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಮ ಮತ್ತು ಪಟ್ಟಣದ ಹಲವು ಕಡೆ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಇಂತಹ ತಂಗುದಾಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅವು ಶಿಥಿಲಾವಸ್ಥೆಗೆ ತಲುಪಿವೆ. ಇಂತಹ ತಂಗುದಾಣಗಳ ಸಾಲಿಗೆ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ಅಂಬಳೆ ಪಾಲದ ಪ್ರಯಾಣಿಕರ ತಂಗುದಾಣ ಸೇರುತ್ತದೆ.

ರಾಷ್ಟ್ರೀಯ ಹೆದ್ದಾರಿ 209ರ ಬಳಿ ಇರುವ ಈ ಪ್ರಯಾಣಿಕರ ತಂಗುದಾಣಕ್ಕೆ ಅಂಬಳೆ, ಹೊಮ್ಮ ಗ್ರಾಮಗಳ ಜನರು ದೂರದ ಮೈಸೂರು, ಯಳಂದೂರಿಗೆ ಬಸ್ ತೆರಳಲು ಬರುತ್ತಾರೆ. ಅಲ್ಲದೆ ಇಲ್ಲಿಯೇ ನಿಂತು ಬಸ್ ಕಾಯುತ್ತಿರುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣವಂತೂ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಹತ್ತಿರ ಹೋಗಲು ಅಸಹ್ಯ ಪಡುವಂತಾಗಿದೆ.

ಇಲ್ಲಿರುವ ಪ್ರಯಾಣಿಕರ ತಂಗುದಾಣ ಸುಣ್ಣಬಣ್ಣ ಕಾಣದೆ ಅದೆಷ್ಟು ವರ್ಷವಾಯಿತೋ? ಜತೆಗೆ ಕೆಲವು ವಿಕೃತ ಬರವಣಿಗೆ ಇಲ್ಲಿ ರಾರಾಜಿಸುತ್ತಿದ್ದು, ಮಹಿಳೆಯರು ಮಕ್ಕಳು ಇದರೊಳಗೆ ನಿಲ್ಲಲು ಮುಜುಗರ ಪಡುವಂತಾಗಿದೆ. ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದ್ದು ಕಟ್ಟಡದ ಒಳಗೆ ಚಕ್ಕೆಗಳು ಉದುರುತ್ತಿವೆ. ಇದರಿಂದ ಮಳೆ ಬಂದರಂತು ಇದರೊಳಗೆ ನಿಲ್ಲೋದೇ ಕಷ್ಟವಾಗುತ್ತದೆ. ಯಾವಾಗ ಬೀಳುತ್ತೋ ಎಂಬ ಭಯವೂ ಕಾಡುತ್ತದೆ.

ಒಟ್ಟಾರೆ ಶಿಥಿಲಾವಸ್ಥೆಯಲ್ಲಿರುವ ಕಾರಣ ಜನ ಇದರ ಬಳಿ ಸುಳಿಯದೆ ಬಿಸಿಲಿರಲಿ, ಮಳೆಯಿರಲಿ ಹೊರಗೆ ನಿಂತು ಕಾಲ ಕಳೆಯುತ್ತಾರೆ. ಇದು ಕಷ್ಟವಾದರೂ ಪರ್ವಾಗಿಲ್ಲ ಎಂಬುದು ಪ್ರಯಾಣಿಕರ ಆಲೋಚನೆಯಾಗಿದೆ. ಇನ್ನು ಇನ್ನೊಂದು ತೊಂದರೆ ಏನೆಂದರೆ ಬಸ್ ನಿಲ್ದಾಣದ ಕಟ್ಟಡವೇ ಒಂದು ಕಡೆಯಿದ್ದರೆ, ಬಸ್ ಗಳು ನಿಲ್ಲುವುದೇ ಇನ್ನೊಂದು ಕಡೆಯಾಗಿದೆ. ಹೀಗಾಗಿ ಪ್ರಯಾಣಿಕರ ತಂಗುದಾಣದ ಕಡೆಗೆ ಹೋಗುವುದಿಲ್ಲ. ಇದರಿಂದ ಹಲವು ವರ್ಷಗಳಿಂದಲೂ ಪಾಳು ಮನೆಯಂತಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಿಥಿಲಾವಸ್ಥೆಯಲ್ಲಿರುವ ಬಸ್ ತಂಗುದಾಣವನ್ನು ದುರಸ್ತಿಪಡಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

See also  ಶಿಡ್ಲಘಟ್ಟದಲ್ಲಿ ದಾಖಲೆಯಿಲ್ಲದ 13ಲಕ್ಷ ರೂ. ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು