News Kannada
Thursday, September 29 2022

ಮೈಸೂರು

ಗಂಡನನ್ನೇ ಉಸಿರು ಗಟ್ಟಿಸಿ ಸಾಯಿಸಿ ಹೃದಯಾಘಾತದಿಂದ ಸತ್ತ ಎಂದು ಕಥೆ ಕಟ್ಟಿದವಳು ಪೊಲೀಸರ ಬಲೆಗೆ - 1 min read

Photo Credit :

ಗಂಡನನ್ನೇ ಉಸಿರು ಗಟ್ಟಿಸಿ ಸಾಯಿಸಿ ಹೃದಯಾಘಾತದಿಂದ ಸತ್ತ ಎಂದು ಕಥೆ ಕಟ್ಟಿದವಳು ಪೊಲೀಸರ ಬಲೆಗೆ

ಮೈಸೂರು: ಹೆಂಡತಿಯೇ ಗಂಡನ ಕೊಲೆ ಮಾಡಿ ಹೃದಾಯಘಾತದಿಂದ ಸತ್ತಿದ್ದಾರೆ ಎಂದು ನಂಬಿಸಿ ಅಂತ್ಯಕ್ರಿಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಹೆಂಡತಿಯನ್ನ ನಗರದ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ….

ಪ್ರಕರಣದ ಹಿನ್ನಲ್ಲೆ: ಮೈಸೂರಿನ ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆ ನಡೆಸುತ್ತಿದ್ದ ಕೃಷ್ಣ(40) ಅವರನ್ನ 2016ರ ಅಕ್ಟೋಬರ್ 18ರಂದು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಅವರ ದೇಹವನ್ನ ಸುಡುವ ಮೂಲಕ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದರು. ಪತಿ ಸತ್ತ ನಂತರ ಪತ್ನಿಯೇ ಚಾಣಕ್ಯ ಶಾಲೆಯನ್ನೂ ನೋಡಿಕೊಳ್ಳುತ್ತಾ ಬಂದಿದ್ದು, ಪತಿ ಸಾವಿನ ಸಂಬಂಧ ಯಾವುದೇ ಅನುಮಾನ ಬರದಂತೆ ಪತ್ನಿ ಎಚ್ಚರಿಕೆ ವಹಸಿದ್ದರು.

ಕೊಲೆ ಮಾಡಿದ್ದೇಕೆ: ಚಾಣಕ್ಯ ಶಾಲೆಯ ವ್ಯವಹಾರದಲ್ಲಿ ನಿರತನಾಗಿದ್ದ ಕೃಷ್ಣ ತಮಗೆ ಸೇರಿದ ಮಿನರಲ್ ವಾಟರ್ ಪ್ಲಾಂಟ್ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದನ್ನು ಮಂಜುನಾಥ್ ಎಂಬುವವರಿಗೆ ಬಾಡಿಗೆ ನೀಡಿದರು. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಮಂಜುನಾಥ್ ಹಾಗೂ ಕೃಷ್ಣನ ಪತ್ನಿ ರಾಧಾ ನಡುವೆ ಸಲುಗೆ ಬೆಳೆದು ಅಕ್ರಮ ಸಂಬಂಧವಿಟ್ಟುಕೊಂಡಿದ್ದರು ಎನ್ನಲಾಗಿದೆ.

2016ರ ಅಕ್ಟೋಬರ್ 18 ರ ರಾತ್ರಿ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ ಪತಿಯ ಕೊಲೆಗೆ ಹೆಂಡತಿಯೇ ಸಂಚು ರೂಪಿಸಿ ಮಂಜುನಾಥ್ ಹಾಗೂ ಸಹಚರರನ್ನು ಮನೆಗೆ ಕರೆಸಿಕೊಂಡಿದ್ದಾಳೆ. ನಿದ್ರೆಯಲ್ಲಿದ್ದ ಕೃಷ್ಣ ಅವರನ್ನ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಯಾರಿಗೂ ಅನುಮಾನ ಬರಾದಂತೆ ಹೃದಾಯಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಭಿಸಿದ್ದಾಳೆ.

ಕೊಲೆ ರಹಸ್ಯ ಬಯಲಾಗಿದ್ದೇಗೆ: ಕುವೆಂಪುನಗರದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ಮೂವರು ಯುವಕರು ಮಾತಿನ ಭರದಲ್ಲಿ ದಿಂಬಿನಿಂದ ಉಸಿರು ಕಟ್ಟಿಸಿ ಸ್ಕೂಲ್ ಕೃಷ್ಣ ಕೊಲೆ ಮಾಡಿ ಒಂದು ವರ್ಷ ಆಯ್ತು, ಯಾರಿಗೂ ಗೊತ್ತೆ ಆಗಲಿಲ್ಲ ನೋಡದ್ರಾ? ಎಂದು ನಗುತ್ತಾ ಒಬ್ಬರಿಗೊಬ್ಬರು ಜೋರಾಗಿ ಕಿರುಚಾಡಿದ್ದಾರೆ. ಅದೇ ಬಾರ್ ನಲ್ಲಿ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಕೃಷ್ಣನ ಸಂಬಂಧಿ ಇದನ್ನ ಕೇಳಿಸಿಕೊಂಡಿದ್ದಾರೆ.

ಮರುದಿನ ಕೃಷ್ಣನ ಸಂಬಂಧಿ ಮನೆಯರಿಗೆ ವಿಷಯ ತಿಳಿಸಿದ್ದು, ಮನೆಯಲ್ಲಿ ನಾಲ್ಕೈದು ದಿನಗಳವರೆಗೆ ಚರ್ಚೆ ನಡೆಸಿ ಕಡೆಗೆ ಕೃಷ್ಣನ ಪತ್ನಿಯನ್ನು ಕೇಳಿದಾಗ ಯಾವುದೇ ಕಾರಣಕ್ಕೂ ಇದು ಕೊಲೆಯಲ್ಲ. ಅವರು ಹೃದಾಯಘಾತದಿಂದ ಸಾವ್ನಪ್ಪಿದ್ದು ಎಂದು ವಾದ ಮಾಡಿದ್ದಾಳೆ.

ಸಿಸಿಬಿ ಪೊಲೀಸರಿಂದ ರಾಧಾ ಬಂಧನ: ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದಂತೆ ಭಯಗೊಂಡ ರಾಧಾ ನವೆಂಬರ್ 5 ರಂದು ಮರಣ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬೆದರಿಕೆ ಹಾಕಿ ಮನೆ ಬಿಟ್ಟು ಹೋಗಿದಳು. ಇವರ ಪತ್ತೆಗೆ ಕುಟುಂಬದ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದರು.

ರಾಧಾ ಅವರ ಮೊಬೈಲ್ ಕರೆಯ ವಿವರಗಳನ್ನು ಕಲೆ ಹಾಕಿದ ಕುವೆಂಪುನಗರ ಪೊಲೀಸರು ಬೆಂಗಳೂರಿಗೆ ತೆರಳಿ ಪಿ.ಜಿಯೊಂದರಲ್ಲಿ ತಲೆ ಮರೆಸಿಕೊಂಡಿದ್ದ ರಾಧಾಳನ್ನ ವಶಕ್ಕೆ ಪಡೆದು ಪತಿಯನ್ನ ಕೊಲೆ ಮಾಡಿದ ಸ್ಥಳ ಮಹಜರು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇಂದು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ತಮ್ಮ ವಶಕ್ಕೆ ಪಡೆದಿದ್ದಾರೆ.

See also  ಟಿಪ್ಪರ್‌ ಹರಿದು ತಾಯಿ ಮಗು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು