News Kannada
Saturday, September 24 2022

ಮೈಸೂರು

ಸಿದ್ದರಾಮಯ್ಯರಿಂದ `ಶೀಲ’ ಭಾಗ್ಯ! - 1 min read

Photo Credit :

ಸಿದ್ದರಾಮಯ್ಯರಿಂದ `ಶೀಲ' ಭಾಗ್ಯ!

ನಾಗಮಂಗಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಭಾಗ್ಯಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ `ಶೀಲ ಭಾಗ್ಯ’ವೂ(ಶಾದಿ ಭಾಗ್ಯ ಎಂದಾಗಬೇಕಿತ್ತು) ಒಂದು. ಹೀಗೆ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳುವ ಭರದಲ್ಲಿ ದಳ ಭಿನ್ನ ಶಾಸಕ ಜಮೀರ್ ಅಹ್ಮದ್ ಖಾನ್ ಎಡವಟ್ಟು ಮಾಡಿದರು.

ತಾಲೂಕಿನ ಬೆಳ್ಳೂರಿನ ಎ.ಎಲ್.ಕೆ. ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾಗಮಂಗಲ ಅಭಿವೃದ್ಧಿಯಾಗಬೇಕೆಂದು ಸಿದ್ದರಾಮಯ್ಯ ಅವರು ಕನಸು ಕಂಡಿದ್ದರು. ಅದು ಇಂದು 128 ಗ್ರಾಮಗಳಿಗೆ ನೀರು ಕೊಡುವ ಮೂಲಕ ನನಸಾಗಿದೆ ಎಂದರು.

ಈ ಕಾರ್ಯಕ್ರಮ ಶಾಸಕ ಎನ್. ಚಲುವರಾಯಸ್ವಾಮಿಗೆ ನಾಡಹಬ್ಬ ಇದ್ದ ಹಾಗೆ. ತನ್ನ ಅಧಿಕಾರಾವಧಿಯಲ್ಲಿ 128 ಗ್ರಾಮಗಳಿಗೆ ಕುಡಿಯುವ ನೀರು ನೀಡಿರುವ ಚಲುವರಾಯಸ್ವಾಮಿ ಅವರನ್ನು 2018ರ ಚುನಾವಣೆಯಲ್ಲೂ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಅವರ ಪರ ಒಲವಿದೆ. 2018ಕ್ಕೆ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ನಾವು(ಮುಸ್ಲಿಂ) ಟಿಪ್ಪು ಜಯಂತಿ ಮಾಡಿ ಎಂದೇನು ಅರ್ಜಿ ಹಾಕಿರಲಿಲ್ಲ. ಸಿದ್ದರಾಮಯ್ಯ ಅವರೇ ಮುಂದೆ ನಿಂತು ಜಯಂತಿ ಮಾಡಿದ್ದಾರೆ. ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ಅವರು ನೀಡುತ್ತಿರುವ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ ಎಂದು ಹೇಳಿದರು.

See also  ಕ್ಷೇತ್ರದ ಜನ ಬಯಸಿದರೆ ಕಿರಿಯ ಮಗ ಚುನಾವಣೆಯಲ್ಲಿ ಸ್ಪರ್ಧೆ: ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು