News Kannada
Monday, September 26 2022

ಮೈಸೂರು

ಮೈಸೂರಿನಲ್ಲಿ :ಪದ್ಮಾವತಿ ಬಿಡುಗಡೆ ಮಾಡದಂತೆ ಆಗ್ರಾಹಿಸಿ ಪ್ರತಿಭಟನೆ - 1 min read

Photo Credit :

ಮೈಸೂರಿನಲ್ಲಿ :ಪದ್ಮಾವತಿ ಬಿಡುಗಡೆ ಮಾಡದಂತೆ ಆಗ್ರಾಹಿಸಿ ಪ್ರತಿಭಟನೆ

ಮೈಸೂರು: ವಿವಾದಿತ ಪದ್ಮಾವತಿ ಚಿತ್ರವನ್ನ ಬಿಡುಗಡೆ ಮಾಡದಂತೆ ಮೈಸೂರಿನಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಜೀ ರಾಜಪೂತ್ ಕ್ಷತ್ರೀಯ ಸಮಾಜ್ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. 

ಇಂದು ನಗರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಮಾವಣೆಗೊಂಡಿ ಮಹಾರಾಣಾ ಪ್ರತಾಪ್ ಸಿಂಗ್ ಜೀ ರಾಜಪೂತ್ ಕ್ಷತ್ರೀಯ ಸಮಾಜದ ನೂರಾರು ಕಾರ್ಯಕರ್ತರು ದೇವರಾಜು ಅರಸು ರಸ್ತ ಮೂಲಕ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಾತೆ ರಾಣಿ ಪದ್ಮಾವತಿಯನ್ನ ಅವಹೇಳಕಾರಿಯಾಗಿ ಪದ್ಮಾವತಿ ಚಿತ್ರದಲ್ಲಿ ಚಿತ್ರಿಸಿದ್ದಾರೆ. ರಾಜಪೂತ್ ಜನಾಂಗದ ಪ್ರತೀಕವಾಗಿರುವ, ಆತ್ಮಾಭಿಮಾನದ ಸಂಕೇತಾದ ಅಪೂರ್ವ ಸೌಂದರ್ಯವತಿ ಶ್ರೀಮತಿ ರಾಣಿ ಪದ್ಮಾವತಿ ರಾಜಾಸ್ಥಾನದ ಚಿತ್ತೋರಘಡದ ರಾಜ ರತನ್ ಸಿಂಗ್ ರವರ ಧರ್ಮಪತ್ನಿ. ಶತ್ರುಗಳನ್ನು ಧೈರ್ಯವಾಗಿ ಎದುರಿಸಿ ತನ್ನ ಪತಿ ತೀರಿಕೊಂಡಾಗ ಸತಿಯಾದ ಮಹಾ ಸಾಧ್ವಿ ಪದ್ಮಾವತಿ.

ಸಂಜಯ ಲೀಲಾ ಬಲ್ಸಾಲಿ ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನ ತಿರುಚಿ ರಾಜಪುತ್ರ ಜನಾಂಗಕ್ಕೆ ಅವಮಾನವಾಗುವ ರೀತಿಯಲ್ಲಿ ಚಿತ್ರಕರಿಸಿದ್ದಾರೆ. ಆದ್ದರಿಂದ ಚಿತ್ರದಲ್ಲಿರುವ ಅನುಚಿತ ಭಾಗವನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ನಗರದಲ್ಲಿ ಪದ್ಮಾವತಿ ಚಿತ್ರವನ್ನ ತೆರೆಗೆ ಬರಲು ಬಿಡಿವುದಿಲ್ಲ ಎಂದು ಪ್ರತಿಭಟನಾಕರಾರು ಎಚ್ಚರಿಕೆ ನೀಡಿದರು.

ಇದೇ ಸಂಧರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಸಂಜಯ ಲೀಲಾ ಬನ್ಸಾಲಿ ವಿರುದ್ದ ನೋಟಿಗಾಗಿ ತನ್ನ ಮೈ ಮಾರಿಕೊಳ್ಳುತ್ತಿರುವ ದೀಪಿಕಾ ಪಡುಕೋಣೆಗೆ ಧಿಕ್ಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

 

See also  ಹಿಂದುಳಿದ ವರ್ಗಗಳ ಮೀಸಲಾತಿ ಹಿಂಬಡ್ತಿ ತೀರ್ಪನ್ನು ವಿರೋಧಿಸಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು