News Kannada
Tuesday, September 27 2022

ಮೈಸೂರು

ಕನ್ನಡನುಡಿ ಹಬ್ಬದಲ್ಲಿ ಸಾಹಿತ್ಯಾಸಕ್ತರ ಮನಸೆಳೆದ ವಿಚಾರಗೋಷ್ಠಿಗಳು - 1 min read

Photo Credit :

ಕನ್ನಡನುಡಿ ಹಬ್ಬದಲ್ಲಿ ಸಾಹಿತ್ಯಾಸಕ್ತರ ಮನಸೆಳೆದ ವಿಚಾರಗೋಷ್ಠಿಗಳು

ಮೈಸೂರು: ಮೂರನೇ ದಿನದ ಗೋಷ್ಠಿ `ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳು’ ಸಾಹಿತ್ಯಾಸಕ್ತರನ್ನು ಹಿಡಿದಿಟ್ಟುಕೊಂಡಿತು. ಲೇಖಕ ಪ್ರಧಾನ ಗುರುದತ್ತ ಅವರು ನವರಾಷ್ಟ್ರೀಯತೆ ಧಾರ್ಮಿಕ ಮೂಲಭೂತವಾದ ವಿಚಾರ ಮಂಡಿಸುತ್ತಾ ವಿಶ್ವದ, ಭಾರತದ ಮತ್ತು ಕರ್ನಾಟಕದ ಸಮಕಾಲೀನ ಧಾರ್ಮಿಕ ಮೂಲಭೂತವಾದ ಮತ್ತು ನವರಾಷ್ಟ್ರೀಯತೆಗಳ ರೂಪಾಂತರಗಳನ್ನು ವಿಸ್ತಾರವಾಗಿ ಕವಿಗಳ, ವಿದ್ವಾಂಸರ ಉಕ್ತಿಗಳೊಡನೆ ಪ್ರಸ್ತಾಪಿಸಿದರು.

ವೀರಣ್ಣ ದಂಡೆ ಅವರು ಅಸಹಷ್ಣುತೆ ವಿಷಮ ವಿಸ್ತಾರ ಕುರಿತು ಮಾತನಾಡಿ, ಎಲ್ಲ ಕಾಲದಲ್ಲೂ ಅಸಹಿಷ್ಣುತೆ ವ್ಯವಸ್ಥೆಗಳನ್ನು ಅತಂತ್ರದ ಸ್ಥಿತಿಗೆ ತಂದು ನಿಲ್ಲಿಸುತ್ತಿದ್ದು, ಆತ್ಮಹತ್ಯೆ ಮತ್ತು ಹತ್ಯೆಗಳ ವಿಷಮ ವಾತಾವರಣ ಸೃಷ್ಟಿಸುತ್ತಿದೆ ಎಂದು ತಿಳಿಸಿದರು.

ಚಿಂತಕಿ ವಿನಯಾ ಒಕ್ಕುಂದ ಅವರು ದಿನನಿತ್ಯ ನಡೆಯುತ್ತಿರುವ ಘಟನೆಗಳನ್ನು ಉದಾಹರಿಸುತ್ತ ಒಟ್ಟಾರೆಯಾಗಿ ಸೃಜನಶೀಲ ವರ್ಗಬೆದುರಿಸುತ್ತಿರುವ ಸಂವಿಧಾನ ದತ್ತ ಅಭಿವ್ಯಕ್ತಿ ಸ್ವಾತಂತ್ಯದ ಬಿಕ್ಕಟ್ಟುಗಳ ಪೂರ್ಣ ಚಿತ್ರಣ ಕಟ್ಟಿಕೊಟ್ಟರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕಾಳೇಗೌಡ ನಾಗವಾರ ಅವರು ಕನ್ನಡ ಸಾಹಿತ್ಯ ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳಿಗೆ ಉತ್ತರವಾಗಿ ವಿಶ್ವಮಾನವ ಸಂದೇಶವನ್ನು ನೀಡಿ ಪರಿಹಾರದ ದಾರಿಯನ್ನು ಗುರುತುಮಾಡಿದೆ ಎಂದರು.

ಜಡ ಪರಿಸ್ಥಿತಿ ಚಲನಶೀಲಗೊಳಿಸುವುದೇ ಚಳುವಳಿಯ ಆಶಯ
ಕೇಂದ್ರೀಕರಣ ಪ್ರಜಾಪ್ರಭುತ್ವಕ್ಕೆ ಮಾರಕ ಚಳುವಳಿಗಳಿಲ್ಲದಿದ್ದರೆ ಸರ್ಕಾರದ ಕೆಟ್ಟ ನೀತಿಗೆ ತಲೆಕೊಡಬೇಕಾಗುತ್ತದೆ ಎಂದು ಹಿಂದುಳಿದ ಆಯೋಗದ ಪ್ರಥಮ ಅಧ್ಯಕ್ಷರು ಹಾಗೂ ಮಾಜಿ ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರೊ. ರವಿ ಕುಮಾರ್ ಹೇಳಿದರು.

ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ನ್ಯಾಯಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನದ ಅನುಷ್ಠಾನಕ್ಕೆ ಜನಪರ ಚಳುವಳಿ ಮೂಲವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತೀಶ್ ಕುಲಕರ್ಣಿ ಅವರು ಮಾತನಾಡಿ, ಮೈಸೂರು ಹೋರಾಟಗಳ ತವರು ನೆಲ ಚಂಪಾರವರು ಸಹ ಹೋರಾಟದಿಂದಲೇ ಮೂಡಿ ಬಂದ ವ್ಯಕ್ತಿತ್ವ. ಜಡವಾದ ಪರಿಸ್ಥಿತಿಯನ್ನು ಚಲನಶೀಲಗೊಳಿಸಿ ಪ್ರಜಾಪ್ರಭುತ್ವನ್ನು ಪುನರ್ ಸ್ಥಾಪಿಸುವುದೇ ಜನಪರ ಚಳುವಳಿಗಳ ಮುಖ್ಯ ಆಶಯ ಎಂದು ತಿಳಿಸಿದರು.

1980ರ ನಂತರ ಕರ್ನಾಟಕದ ನರಗುಂದ ನವಲಗುಂದಗಳಲ್ಲಿ ರೈತ ಚಳುವಳಿ ಆರಂಭವಾಯಿತು. ಕರ್ನಾಟಕದ ತೆಂಗು ಬೆಳೆಗಾರರ ಹೋರಾಟಗಳು ಇಂದು ನೀರಾ ಉತ್ಪನ್ನಗಳನ್ನು ಸರ್ಕಾರದಿಂದ ಪರವನಾಗಿ ಪಡೆದುಕೊಳ್ಳುವಂತೆ ಮಾಡಿದೆ. ರೈತರು ಅಶಿಕ್ಷಿತರು ಅವರನ್ನು ಸಂಘಟಿತರಾಗುವಂತೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ರೈತ ಪರ ಚಳುವಳಿಗಳು 33 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿವೆ ಎಂದು ಚಾಮರಸ ಮಾಲಿಪಾಟೀಲ ತಿಳಿಸಿದರು.

ಕನ್ನಡ ಚಳುವಳಿಗಳಿಗೆ 1600 ವರ್ಷಗಳ ಇತಿಹಾಸವಿದೆ. ಬಿ.ಎಂ.ಶ್ರೀ ರವರು ಏರಿಸಿ ಏರಿಸಿ ಕನ್ನಡದ ಬಾವುಟ ಎಂದು ನಾಡಿನಾದ್ಯಂತ ಸಂಚರಿಸಿ ಕನ್ನಡ ಚಳುವಳಿಗೆ ಪ್ರಥಮ ವೇದಿಕೆಯಾಗುವಂತೆ ಮಾಡಿದರು. ಒಂದು ಕಡೆ ಏನ್ನಡ ಮತ್ತೊಂದು ಕಡೆ ಏಕ್ಕಡ ಎಂಬ ಪರಿಸ್ಥಿತಿಯಲ್ಲಿ ಬೆಂಗಳೂರು ಬದುಕುವಂತಾಗಿದೆ.

ಗೋಕಾಕ್ ವರದಿ ಅನುಷ್ಠಾನಕ್ಕೆ ಡಾ. ರಾಜ್ ಕುಮಾರ್ ಚಳುವಳಿಯಲ್ಲಿ ಕಾಲಿಡುವ ಮೂಲಕ ಗೋಕಾಕ್ ಚಳುವಳಿ ಕನ್ನಡ ಚಳುವಳಿಗಳ ದಿಕ್ಕು ಬದಲಾಯಿಸಿತು. ಸರೋಜಿನ ಮಹಿಷಿ ವರದಿ ಅನುಷ್ಠಾನಕ್ಕಾಗಿ ಕನ್ನಡ ಪರ ಹೋರಾಟ ನಡೆಯುತ್ತಿದೆ ಎಂದು ಖ್ಯಾತ ಕನ್ನಡಪರ ಹೋರಾಟಗಾರ ರಾ.ನಂ ಚಂದ್ರಶೇಖರರವರು ತಿಳಿಸಿದರು.

See also  ವಿದ್ಯುತ್ ಉತ್ಪಾದನೆ ಸ್ವಾವಲಂಬನೆಗೆ ಕ್ರಮ: ಸಿಎಂ

ಸಂಪತ್ತಿನ ಬಹುಪಾಲು ದುಡಿಯುವವರ ಬದಲು ದುಡಿಸುತ್ತಿರುವವರಿಗೆ ಸಲ್ಲುತ್ತಿದೆ. ಕಾರ್ಮಿಕರ ಬೆನ್ನು ಮೂಳೆಗಳನ್ನು ಮುರಿಯುತ್ತಿದ್ದಾರೆ. ನಿರ್ಜೀವ ಯಂತ್ರಗಳಿಗೆ ಇರುವ ಬೆಲೆ ಕಾರ್ಮಿಕರ ಬದಕು ಮನಸ್ಸು ಹಾಗೂ ಕನಸುಗಳಿಗೆ ಇಲ್ಲದಂತಾಗಿದೆ. ಉದಾರಿಕರಣ, ಜಾಗತೀಕರಣ, ಖಾಸಗಿಕರಣಗಳು ಇಂದು ಕಾರ್ಮಿಕರನ್ನು ಸುಲಿಯುತ್ತಿದೆ. ಇಂದಿನ ಪರಿಸ್ಥಿತಿ ಕಾರ್ಮಿಕರನ್ನು ಸಮಾಜದ ಕಟ್ಟಕಡೆಯ ಭಾಗಕ್ಕೆ ತಂದು ನಿಲ್ಲಿಸಿದೆ. ಕಾರ್ಮಿಕರ ಕಾನೂನುಗಳ ಕನ್ನಡದಲ್ಲಿರಲಿ ಎಂದು ಸಿ.ಐ.ಟಿ.ಯು ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ತಿಳಿಸಿದರು. ಜನಪರ ಹೋರಾಟ ಮಹಿಳಾ ಹೋರಾಟದ ಒಂದು ಭಾಗವೇ ಆಗಿದೆ. ಮೂರನೇ ಲಿಂಗದ ಹೋರಾಟ ಅವರ ಹಕ್ಕುತ್ತಾಯಗಳ ಬಗ್ಗೆ ಡಾ. ಮೀರಾ ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು