News Kannada
Saturday, October 01 2022

ಮೈಸೂರು

ಧರ್ಮಸಂಸದ್ ವೇಳೆ ಕುಸಿದು ಬಿದ್ದ ನಂಜನಗೂಡು ಪಿಎಸ್ ಐ - 1 min read

Photo Credit :

ಧರ್ಮಸಂಸದ್ ವೇಳೆ ಕುಸಿದು ಬಿದ್ದ ನಂಜನಗೂಡು ಪಿಎಸ್ ಐ

ಮೈಸೂರು: ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕಾರ್ಯವಿರ್ವಹಿಸಲು ತೆರಳಿದ ನಂಜನಗೂಡು ಗ್ರಾಮಾಂತರ ಠಾಣೆಯ ಪಿಎಸ್ಐ ಕುಸಿದು ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಂಜನಗೂಡು ಗ್ರಾಮಾಂತರ ಠಾಣೆಯಿಂದ ಉಡುಪಿಗೆ ಬಂದೋಬಸ್ತ್ ಗಾಗಿ ಪಿಎಸ್ಐ ಜಯಸ್ವಾಮಿ ತೆರಳಿದ್ದರು. ಬಂದೋಬಸ್ತಿನ ವೇಳೆ ಕಾರ್ಯನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದ ಕಾರಣ ಬಲಭಾಗದ ಕೈ ಮತ್ತು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ವೇದಿಕೆಯ ಮೇಲೆ ಕುಸಿದು ಬಿದ್ದ ಪಿಎಸ್ಐ ಜಯಸ್ವಾಮಿ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಉಡುಪಿ ಮಠದ ಭಕ್ತಾದಿಗಳು ಕರೆದೊಯ್ದಿದ್ದಾರೆ. ಕರ್ತವ್ಯಕ್ಕೆ ತೆರಳಿದ್ದ ಪಿಎಸ್ಐ ಜಯಸ್ವಾಮಿ ಕೈ ಮತ್ತು ಕಾಲು ಸ್ವಾಧೀನ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಸೌಜನ್ಯಕ್ಕಾದರೂ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂಬ ಮಾತು ಕೇಳಿ ಬಂದಿದೆ.

ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜಯಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ.

See also  ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡೆಗಳನ್ನಾಡಿ ಖುಷಿಪಟ್ಟ ವಿದ್ಯಾರ್ಥಿನಿಯರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು