News Kannada
Tuesday, October 04 2022

ಮೈಸೂರು

ಅಮ್ಮಾ, ಇಂದಿರಾ, ಅಪ್ಪಾಜಿ ಬಳಿಕ ರಮ್ಯಾ ಕ್ಯಾಂಟೀನ್! - 1 min read

Photo Credit :

ಅಮ್ಮಾ, ಇಂದಿರಾ, ಅಪ್ಪಾಜಿ ಬಳಿಕ ರಮ್ಯಾ ಕ್ಯಾಂಟೀನ್!

ಮಂಡ್ಯ: ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಬಳಿಕ ಈಗ ರಮ್ಯಾ ಕ್ಯಾಂಟೀನ್ ಮಂಡ್ಯದಲ್ಲಿ ಸುದ್ದಿ ಮಾಡಿದೆ. ಮಾಜಿ ಸಂಸದೆ, ನಟಿ ರಮ್ಯಾ ಅಭಿಮಾನಿಯೊಬ್ಬರು ಮಂಡ್ಯದಲ್ಲಿ ಈ ಕ್ಯಾಂಟೀನ್ ತೆರೆದಿದ್ದಾರೆ.

ಹೋಟೆಲ್ ಉದ್ಯಮದಲ್ಲಿರುವ ರಘು ಎಂಬವರೇ ಈ ಕ್ಯಾಂಟೀನ್ ತೆರೆದಿರುವುದು. ರಮ್ಯಾರ ಅಭಿಮಾನಿಯಾಗಿರುವ ಅವರು ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡುವ ಮೂಲಕ ಜನಸೇವೆಗೆ ಮುಂದಾಗಿದ್ದಾರೆ. ಈ ಕ್ಯಾಂಟೀನ್ ನಲ್ಲಿ ಇಡ್ಲಿಗೆ 10 ರೂ., ದೋಸೆ, ರವೆ ಇಡ್ಲಿ ಸಹಿತ ಇತರ ಹಲವಾರು ರೀತಿಯ ತಿಂಡಿಗಳು ಇಲ್ಲಿ ಲಭ್ಯವಿದೆ. ಇಲ್ಲಿ ತಿನ್ನಬಹುದು ಅಥವಾ ಪಾರ್ಸೆಲ್ ಕೂಡ ಕೊಂಡುಹೋಗಬಹುದು,

ಇನ್ನು ನೀವು ಮಂಡ್ಯದವರಾಗಿದ್ದರೆ ಈ ಕ್ಯಾಂಟೀನ್ ಹುಡುಕಲು ಹೆಚ್ಚು ಕಷ್ಟಪಡಬೇಕಿಲ್ಲ. ಯಾಕೆಂದರೆ ಇದು ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿದೆ. ಭಾನುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅತ್ಮಾನಂದ ಅವರು ಈ ಕ್ಯಾಂಟೀನ್ ನ್ನು ಉದ್ಘಾಟಿಸಿದರು.

See also  ಟಿ-20 ಕ್ರಿಕೆಟ್ ಬೆಟ್ಟಿಂಗ್: ಇಬ್ಬರು ಬುಕ್ಕಿಗಳು ಅಂದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು