News Kannada
Tuesday, September 27 2022

ಮೈಸೂರು

ಸಿಎಂ ಸಿದ್ದರಾಮಯ್ಯ ರಾವಣ ರಾಜ್ಯ ನಡೆಸುತ್ತಿದ್ದಾರೆ: ಸಚಿವ ಅನಂತ್ ಕುಮಾರ್ - 1 min read

Photo Credit :

ಸಿಎಂ ಸಿದ್ದರಾಮಯ್ಯ ರಾವಣ ರಾಜ್ಯ ನಡೆಸುತ್ತಿದ್ದಾರೆ: ಸಚಿವ ಅನಂತ್ ಕುಮಾರ್

ಮೈಸೂರು: ಸಿಎಂ ಸಿದ್ದರಾಮಯ್ಯ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಕೋಮು ಸೌಹರ್ದತೆ ಕಾಪಾಡಲು ವಿಫಲವಾಗಿದ್ದು, ಅವರಿಗೆ ಕಾಮಾಲೆಯಾಗಿದೆ. ಕರ್ನಾಟಕದಲ್ಲಿ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್, ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ರಾಜ್ಯದಲ್ಲಿ ಕೋಮು ಸೌಹರ್ದತೆ ಕಾಪಾಡಲು ವಿಫಲರಾಗಿದ್ದಾರೆ. ಇವರಿಗೆ ಕಾಮಾಲೆಯಾಗದೆ. ಎಲ್ಲವೂ ಹಳದಿಯಾಗಿ ಕಾಣಿಸುತ್ತಿದೆ ಎಂದ ಸಚಿವರು, ರಾಜ್ಯದಲ್ಲಿ ರಾವಣ ರಾಜ್ಯದ ಆಡಳಿತವಿದೆ ಎಂದು ವಾಗ್ದಾಳಿ ನಡೆಸಿದರು.

ಹುಣಸೂರಿನಲ್ಲಿ ಹನುಮಜಯಂತಿಗೆ ಅನುಮತಿ ನೀಡಿಲ್ಲ. ಟಿಪ್ಪು ಜಯಂತಿ, ಈದ್ ಮಿಲಾದ್ ಮೆರವಣಿಗೆ ನಡೆಯಬಹುದು. ಆದರೆ ಹುನುಮ ಜಯಂತಿಗೆ ಮರೆವಣಿಗೆ ಮಾತ್ರ ಮಾಡಬಾರದು, ಇದು ಎಷ್ಟು ಸರಿ? ಪುರಾಣದಲ್ಲಿ ಕರ್ನಾಟಕವನ್ನು ಹುನುಮನ ನಾಡು ಎಂದು ಕರೆದಿದ್ದಾರೆ.

ಕರ್ನಾಟಕದಲ್ಲಿ ಕೋಮು ಸೌಹಾರ್ದತೆ ಕದಡಲು ಮುಖ್ಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಿದ್ದಾರೆ. ಹಿಂದುಗಳ ಕಾರ್ಯಕ್ರಮಕ್ಕೆ ನಿಷೇಧ ಹೇರಿ, ತಡೆಯೊಡ್ಡಲಾಗುತ್ತಿದೆ. ರಾಜ್ಯ ಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಿದೆ. 19 ಹಿಂದು ಯುವಕರ ಕಗ್ಗೊಲೆಯಾಗಿದೆ. ಹತ್ಯೆಯ ಹಿಂದೆ ಹಲವು ಸಂಘಟನೆಗಳ ಕೈವಾಡವಿದ್ದರೂ ರಾಜ್ಯ ಸರ್ಕಾರ ಸುಮ್ಮನಿದೆ.

ಹತ್ಯೆಯಾದವರ ಮನೆಗೆ ಸೌಜನ್ಯಕ್ಕೂ ಸಿದ್ದರಾಮಯ್ಯ ಭೇಟಿ ನೀಡಿಲ್ಲ. ಸಿಎಂ ಆಡಳಿತದಲ್ಲಿ ಯಾವತ್ತೂ ಕಾನೂನು ಸುವ್ಯವಸ್ಥೆಗೆ ರಜೆ. ಹನುಮನ ಭಕ್ತರನ್ನು ಬಂಧಿಸಲಾಗಿದೆ. ಅದರಲ್ಲೂ ಸಂಸದ ಪ್ರತಾಪ್ ಸಿಂಹರನ್ನೂ ಬಂಧಿಸಲಾಗಿದೆ. ಸಂಸದರನ್ನು ಬಂಧನ ಮಾಡಿದ ಕೂಡಲೇ ಸಭಾಪತಿಗೆ ದೂರು ನೀಡಬೇಕು. ಇದರ ಬಗ್ಗೆ ನಾವು ಸುಮ್ಮನಿರಲ್ಲ .ಜನರ ನಡುವೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಡಿಸೆಂಬರ್ ನಲ್ಲಿ ನಡೆಯುವ ಸಂಸತ್ ನಲ್ಲಿಯೂ ಸಹ ಇದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

See also  ಜನವಸತಿ ಪ್ರದೇಶದಲ್ಲಿ ಟವರ್ ಅಳವಡಿಕೆಗೆ ನ್ಯಾಯಾಲಯ ತಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು