News Kannada
Friday, October 07 2022

ಮೈಸೂರು

ಮಾದರಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದ ಸಲಗ - 1 min read

Photo Credit :

ಮಾದರಹಳ್ಳಿ ಕೆರೆಯಲ್ಲಿ ಪ್ರತ್ಯಕ್ಷವಾದ ಸಲಗ

ಭಾರತೀನಗರ: ಮುತ್ತತ್ತಿ ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದ ಸಲಗವೊಂದು ಮಾದರಹಳ್ಳಿ ಗ್ರಾಮದ ಜಮೀನುಗಳಲ್ಲಿ ಠಿಕಾಣಿ ಹೂಡಿದ್ದು, ಗ್ರಾಮಸ್ಥರನ್ನು ಆತಂಕಗೊಳಿಸಿದೆ.

ಮುತ್ತತ್ತಿ, ಕಬ್ಬಾಳು, ಹಲಗೂರು, ತೊರೆಬೊಮ್ಮನಹಳ್ಳಿ, ಮಠದದೊಡ್ಡಿ ಕ್ಯಾತಘಟ್ಟ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಮಾರ್ಗವಾಗಿ ಮಾದರಹಳ್ಳಿ ತಲುಪಿರುವ ಒಂಟಿ ಸಲಗವು ಶನಿವಾರ ಮುಂಜಾನೆ ದೊಡ್ಡರಸಿನಕೆರೆ-ಮಾದರಹಳ್ಳಿ ಮಧ್ಯೆ ಇರುವ ಸೂಳೆಕೆರೆಯಲ್ಲಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ವಿಷಯ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಆನೆಯನ್ನು ನೋಡಲು ಮುಗಿಬಿದ್ದರು.

ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಶಶಿಧರ್, ರವಿ ಹಾಗೂ ಸಿಪಿಐ ನವೀನ್ ಮತ್ತು ಪಿಎಸ್ಐ ಅಯ್ಯನಗೌಡ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಆನೆ ಇರುವ ಸ್ಥಳಕ್ಕೆ ಜನರು ಧಾವಿಸುವುದನ್ನು ತಪ್ಪಿಸಿದರು.

ಹಲವರು ಆನೆಯತ್ತ ಕಲ್ಲು ತೂರುವುದು, ಕಿರುಚುತ್ತಿದ್ದರು. ಇದರಿಂದ ಆನೆ ಕೋಪಗೊಂಡು ಜನರ ಗುಂಪಿನತ್ತ ದಾಳಿ ಮಾಡುವ ಸಂಭವವಿತ್ತು. ಪೊಲೀಸರು ಸಕಾಲಕ್ಕೆ ಆಗಮಿಸಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಿ ಆನೆ ಇರುವ ಸ್ಥಳದತ್ತ ಯಾರೂ ತೆರಳದಂತೆ ಸೂಚಿಸಿದರು.

ಆನೆ ನಡೆದು ಬಂದಿರುವ ಹಾದಿಯನ್ನು ಗುರುತಿಸಿ ಮತ್ತೇ ಅದೇ ಹಾದಿಯಲ್ಲಿ ಕಾಡಿಗೆ ಸೇರುವ ಪ್ರಯತ್ನದಲ್ಲಿದ್ದು, ಸಂಜೆಯ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿನತ್ತ ಕಳುಹಿಸಿದರು.

ಆನೆ ನಡೆದು ಹೋಗುವ ಮಾರ್ಗದಲ್ಲಿ ಬರುವ ಗ್ರಾಮಗಳು ಹಾಗೂ ಜಮೀನಿನ ಭಾಗದಲ್ಲಿ ಜನರು ಮನೆಯಿಂದ ಹೊರಬಾರದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.

See also  ಬೆಳ್ಳಂಬೆಳಗ್ಗೆ ಬಾಗಿಲು ತೆರದ ಮದ್ಯದಂಗಡಿ ವಿರುದ್ಧ ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು